Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಭೂ ಹಗರಣ: ಪ್ರಿಯಾಂಕಾ ಜತೆ ಜೈಪುರದಲ್ಲಿ ED ತನಿಖೆಗೆ ಹಾಜರಾದ ವಾದ್ರಾ

ಜೈಪುರ : ರಾಜಸ್ಥಾನದ ಗಡಿ ಜಿಲ್ಲೆಯಾಗಿರುವ ಬಿಕಾನೇರ್‌ ನಲ್ಲಿ ಭೂ ಕಬಳಿಕೆ ಹಗರಣದ ಬಗೆಗಿನ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರಿಂದು ಜೈಪುರದಲ್ಲಿನ ED ವಲಯ ಕಾರ್ಯಾಲಯಕ್ಕೆ ಆಗಮಿಸಿದರು.

ಎಐಸಿಸಿ  ಪ್ರಧಾನ ಕಾರ್ಯದರ್ಶಿಯಾಗಿರುವ ಪತ್ನಿ ಪ್ರಿಯಾಂಕಾ ಗಾಂಧಿ ಅವರು ರಾಬರ್ಟ್‌ ವಾದ್ರಾ ಜತೆ ED ಕಾರ್ಯಾಲಯದ ವರೆಗೆ ಆಗಮಿಸಿದರು.

ಜಾರಿ ನಿರ್ದೇಶನಾಲಯದ ಎದುರು ವಾದ್ರಾ ತನಿಖೆಗೆ ಹಾಜರಾಗುತ್ತಿರುವುದು ನಾಲ್ಕನೇ ಬಾರಿ ಮತ್ತು ಜೈಪುರದಲ್ಲಿ ಮೊದಲನೇ ಬಾರಿ ಯಾಗಿದೆ.

ಭೂ ಕಬಳಿಕೆ ಹಗರಣದ ತನಿಖೆ ಸಂಬಂಧ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಕೂಡದೆಂದು ವಿನಂತಿಸಿಕೊಂಡದ್ದನ್ನು ಪರಿಗಣಿಸಿದ್ದ ರಾಜಸ್ಥಾನ ಹೈಕೋರ್ಟ್‌, ಜೈಪುರದಲ್ಲಿನ ED ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಿ ಸಹಕರಿಸುವಂತೆ ರಾಬರ್ಟ್‌ ವಾದ್ರಾ ಮತ್ತು ಆತನ ತಾಯಿಗೆ ಸೂಚಿಸಿತ್ತು.

No Comments

Leave A Comment