Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಮಂಧನಾ ಮಿಂಚಿದರೂ ಸೋತ ವನಿತೆಯರು

ಹ್ಯಾಮಿಲ್ಟನ್ : ಭಾರತೀಯ ವನಿತಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ಮಿಂಚಿದರೂ ಟೀಮ್ ಇಂಡಿಯಾ ಪಂದ್ಯ ಗೆಲ್ಲಲು ವಿಫಲವಾಯಿತು.
ಇದರೊಂದಿಗೆ ಎಲ್ಲಾ ಮೂರು ಚುಟುಕು ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ವೈಟ್ ವಾಶ್ ಅನುಭವಿಸಿದೆ.

ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ಅನುಭವಿ ಸೋಫೀ ಡಿವೈನ್ 72  ರನ್ ಸಹಾಯದಿಂದ ನಿಗದಿತ 20  ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು.  ನಾಯಕಿ ಆಮಿ ಸ್ಯಾಟರ್ ವೈಟ್ 31  ರನ್ ಗಳಿಸದರೆ ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

162 ರನ್ ಗುರಿ ಬೆನ್ನಟ್ಟಿದ ಭಾರತೀಯ ಮಹಿಳೆಯರು ನಾಲ್ಕು ವಿಕೆಟ್ ನಷ್ಟಕ್ಕೆ ಗಳಿಸಿದ್ದು 159 ರನ್. ಇದರಿಂದ ಎರಡು ವಿಕೆಟ್ ಗಳ ಸೋಲು ಅನುಭವಿಸಬೇಕಾಯಿತು. ಕಳೆದೆರಡು ಪಂದ್ಯಗಳಲ್ಲಿ ವಿಫಲವಾಗಿದ್ದ ಓಪನಿಂಗ್ ಇಂದು ಮತ್ತೆ ಕೈಕೊಟ್ಟಿತು. ಯುವ ಆಟಗಾರ್ತಿ ಪ್ರಿಯಾ ಪೂನಿಯಾ ಮತ್ತೆ ರನ್ ಗಳಿಸಲು ವಿಫಲರಾದರು. ಅವರು ಗಳಿಸಿದ್ದು ಕೃವಲ ಒಂದು ರನ್. ಜೆಮಿಮಾ ರೋಡ್ರಿಗಸ್ 21 ರನ್ ಬಾರಿಸಿದರೂ ಹೆಚ್ಚು ಹೊತ್ತು ಆಡಲಿಲ್ಲ.

ಮಿಂಚಿದ ಮಂಧನಾ: ನ್ಯೂಜಿಲ್ಯಾಂಡ್ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಸ್ಮೃತಿ ಮಂಧನಾ ಇಂದು ಮತ್ತೆ ಉತ್ತಮ ಪ್ರದರ್ಶನ ನೀಡಿದರು. 62 ಎಸೆತಗಳಿಂದ 86 ರನ್ ಬಾರಿಸಿದ ಮಂಧನಾ ಡಿವೈನ್ ಗೆ ವಿಕೆಟ್ ಒಪ್ಪಿಸಿ ತಮ್ಮ ಚೊಚ್ಚಲ ಟಿ-ಟ್ವೆಂಟಿ ಶತಕದಿಂದ ವಂಚಿತರಾದರು. ಮಂಧನಾ ಔಟ್ ಆಗುವ ವೇಳೆಗೆ ಭಾರತ 15.3 ಓವರ್ ನಲ್ಲಿ123 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.

ಮಂಧನಾ ವಿಕೆಟ್ ಪತನದ ನಂತರ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ತಂಡವನ್ನು ಆಧರಿಸುವ ಕೆಲಸ ಮಾಡಿದರೂ ರನ್ ವೇಗವಾಗಿ ಬರಲಿಲ್ಲ. ಕೊನೆಯ ಓವರ್ ನಲ್ಲಿ ಗೆಲ್ಲಲು 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಭಾರತ ಗಳಿಸಿದ್ದು 13 ರನ್. ಮಿಥಾಲಿ ರಾಜ್ 24 ರನ್ ಗಳಿಸಿದರೆ ದೀಪ್ತಿ ಶರ್ಮಾ 21ರನ್ ಗಳಿಸಿದರು.  ಸೋಫಿ ಡಿವೈನ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು

 

No Comments

Leave A Comment