Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಪುಣೆ ಸಮೀಪ ತರಬೇತಿ ವಿಮಾನ ಪತನ; ಪೈಲಟ್‌ಗೆ ಕೈಮೂಳೆ ಮುರಿತ

ಮಹಾರಾಷ್ಟ್ರ : ಕಾರ್ವರ್‌ ಏವಿಯೇಶನ್‌ ಇನ್‌ಸ್ಟಿಟ್ಯೂಟ್‌ ನ ತರಬೇತಿ ವಿಮಾನವೊಂದು ಇಂದು ಮಂಗಳವಾರ ಪುಣೆಯ ಇಂದಾಪುರ ಸಮೀಪ ಪತನಗೊಂಡ ದುರಂತದಲ್ಲಿ ಪೈಲಟ್‌ ಗಾಯಗೊಂಡು ಒಡನೆಯೇ ಬಾರಾಮತಿ  ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಗಾಯಗೊಂಡ ಪೈಲಟ್‌ ನನ್ನು ಸಿದ್ಧಾರ್ಥ ಎಂದು ಗುರುತಿಸಲಾಗಿದ್ದು ಆತನ  ಕೈಮೂಳೆ ಮುರಿದಿದೆ.ಈ ವಿಮಾನಾಪಘಾತ ಇಂದು ಮಧ್ಯಾಹ್ನ 12.30ರ ಹೊತ್ತಿಗೆ ವಿಮಾನ ಟೇಕಾಫ್ ಆದ ಸ್ವಲ್ಪವೇ ಹೊತ್ತಿನಲ್ಲೇ ನಡೆದಿದೆ.

ವಿಮಾನ ಪತನವಾಗುತ್ತಿರುವುದನ್ನು ಕಾಣುತ್ತಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರ ಪೈಲಟ್‌ ನನ್ನು ರಕ್ಷಿಸುವಲ್ಲಿ ನೆರವಾದರು.

ಕಾರ್ವರ್‌ ಏವಿಯೇಶನ್‌ ವಿಮಾನ ಚಾಲನಾ ತರಬೇತಿ ಸಂಸ್ಥೆಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಆದರೆ ಘಟನೆಯ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಹಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Read more at https://www.udayavani.com/kannada/news/national-news/358899/trainee-aircraft-crashes-near-pune-pilot-injured#tFfui3rKSKUwMAVB.99

No Comments

Leave A Comment