Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಸುತ್ತೂರು ಜಾತ್ರೆಯಲ್ಲಿ ಅವಘಡ : ಶ್ರೀಗಳು ಅಪಾಯದಿಂದ ಪಾರು

ಮೈಸೂರು: ಸುತ್ತೂರು ಜಾತ್ರಾಮಹೋತ್ಸವದಲ್ಲಿ ನೈಟ್ರೋಜನ್ ಬಲೂನ್ ಸ್ಪೋಟಗೊಂಡ ಘಟನೆ ವರದಿಯಾಗಿದೆ. ಸುತ್ತೂರು ಜಾತ್ರಾ ಮಹೋತ್ಸವದ ಪ್ರಯುಕ್ತ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾದ್ದಾರೆ. ಘಟನಾ ಸ್ಥಳದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುತ್ತೂರು ಮಠದ ಪೀಠಾದ್ಯಕ್ಷರಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡುತ್ತಿದ್ದ ವೇಳೆ ಅವರು ನಿಂತಿದ್ದ ಸ್ಥಳದ ಪಕ್ಕದಲ್ಲೇ ನೈಟ್ರೋಜನ್ ಬಲೂನಿಗೆ ಬೆಂಕಿ ಹತ್ತಿಕೊಂಡು ಅದು ಇದ್ದಕ್ಕಿದ್ದಂತೆಯೇ ಸ್ಪೋಟಗೊಂಡಿತು. ಈ ಸಂದರ್ಭದಲ್ಲಿ ಸ್ವಾಮಿಗಳವರೊಂದಿಗೆ ಕುಸ್ತಿಪಟುಗಳು ಮತ್ತು ಇತರರು ಇದ್ದರು. ಕೂದಲಲೆಯ ಅಂತರದಲ್ಲಿ ಸ್ವಾಮೀಜಿಯವರು ಅಪಾಯದಿಂದ ಪಾರಾದರು. ಆದರೆ ದುರದೃಷ್ಟವಶಾತ್ ಮೂವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ವಾಮೀಜಿಯವರು ಸ್ಪೋಟದ ಅಪಾಯದಿಂದ ಪಾರಾದ ವಿಡಿಯೋ ಒಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.

No Comments

Leave A Comment