Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಉತ್ತರಪ್ರದೇಶ ವಿಧಾನಸಭೇಲಿ ಭಾರೀ ಕೋಲಾಹಲ; ಗೂಂಡಾ ವರ್ತನೆ ಎಂದ ಯೋಗಿ

ಲಕ್ನೋ: ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉತ್ತರಪ್ರದೇಶ ರಾಜ್ಯಪಾಲರಾದ ರಾಮ್ ನಾಯ್ಕ್ ಅವರ ಮೇಲೆ ವಿರೋಧ ಪಕ್ಷದ ಸದಸ್ಯರು ಮಂಗಳವಾರ ತೀವ್ರ ಕೋಲಾಹಲ ಎಬ್ಬಿಸಿ, ಪೇಪರ್ ಬಾಲ್ಸ್ ಅನ್ನು ಎಸೆದ ಘಟನೆ ನಡೆದಿದೆ.

ರಾಜ್ಯಪಾಲರಾದ ರಾಮ್ ನಾಯ್ಕ್ ಅವರು ಮೊದಲ ದಿನದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಆರಂಭಿಸುತ್ತಿದ್ದಂತೆಯೇ  ಸಮಾಜವಾದಿ ಮತ್ತು ಬಹುಜನ್ ಸಮಾಜ ಪಕ್ಷದ ಸದಸ್ಯರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿ( ಗವರ್ನರ್ ವಾಪಸ್ ಹೋಗಿ) ವಿರೋಧ ವ್ಯಕ್ತಪಡಿಸಿದ್ದರು.

ತದನಂತರ ಪೇಪರ್ ಉಂಡೆ(ಬಾಲ್ಸ್) ಮಾಡಿ ಅದನ್ನು ರಾಜ್ಯಪಾಲರು ಭಾಷಣ ಮಾಡುತ್ತಿದ್ದ ಪೋಡಿಯಂನತ್ತ ಎಸೆದಿದ್ದಾರೆ. ಉತ್ತರಪ್ರದೇಶ ವಿಧಾನಸಭೆಯೊಳಗೆ ಗೂಂಡಾಗಳಂತೆ ವರ್ತಿಸಿದ್ದ ಎಸ್ಪಿ, ಬಿಎಸ್ಪಿ ಶಾಸಕರ ವರ್ತನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖಂಡಿಸಿದ್ದಾರೆ.

No Comments

Leave A Comment