Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಫೆ.11ರಂದು ಎರಡನೇ ಮದುವೆ; ದೃಢಪಡಿಸಿದ ಸೌಂದರ್ಯಾ ರಜನಿಕಾಂತ್‌

ಹೊಸದಿಲ್ಲಿ : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್‌ ತಾನು ಈ ತಿಂಗಳಲ್ಲಿ  ಚಿತ್ರನಟ-ಉದ್ಯಮಿ ವಿಶಾಖನ್‌ ವನಂಗಮುಡಿ ಅವರನ್ನು ಮದುವೆಯಾಗಲಿರುವುದನ್ನು ದೃಢಪಡಿಸಿದ್ದಾರೆ.  ಅಂದ ಹಾಗೆ ಇದು ಸೌಂದರ್ಯಾ ಅವರಿಗೆ ಎರಡನೇ ಮದುವೆ !

ಇದೇ ಫೆ.11ರಂದು ಚೆನ್ನೈನಲ್ಲಿ ಸೌಂದರ್ಯಾ – ವಿಶಾಖನ್‌ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಪೂರ್ವದ ಎರಡು ದಿನಗಳ ಸಂಭ್ರಮೋಲ್ಲಾಸದ ಕಾರ್ಯಕ್ರಮಗಳು ಫೆ.9ರಂದೇ ಆರಂಭವಾಗಲಿವೆ.

ಸೌಂದರ್ಯಾ ಅವರು ಟ್ವಿಟರ್‌ ಮೂಲಕ ತನ್ನ ಎರಡನೇ ಮದುವೆ ಸುದ್ದಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. “ವಿಶಾಖನ್‌ ಜತೆ ಮದುವೆಗೆ  ಇನ್ನೊಂದೇ ವಾರ ಇದೆ – ಸೌಂದರ್ಯಾ’ ಎಂದಾಕೆ  ಸಂಕ್ಷಿಪ್ತವಾಗಿ ಟ್ವೀಟ್‌ ಮಾಡಿದ್ದಾಳೆ.

ಸೌಂದರ್ಯಾಗೆ ಈ ಮೊದಲು ಕೈಗಾರಿಕೋದ್ಯಮಿ ಅಶ್ವಿ‌ನ್‌ ರಾಮ್‌ ಕುಮಾರ್‌ ಜತೆಗೆ ಮದುವೆಯಾಗಿತ್ತು. ಈ ದಂಪತಿ ಏಳು ವರ್ಷ ಜತೆಗೂಡಿ ಬಾಳ್ವೆ ನಡೆಸಿ, 2016ರಲ್ಲಿ ವಿಚ್ಛೇದನೆ ಪಡೆದುಕೊಂಡಿತ್ತು.  ಈ ದಂಪತಿಗೆ ಆರು ವರ್ಷದ ಪುತ್ರ, ವೇದ ಕೃಷ್ಣ, ಇದ್ದು ಆತನು ತಾಯಿ ಸೌಂದರ್ಯಾ ಜತೆಗೆ ಇದ್ದಾನೆ.

ರಜನಿಕಾಂತ್‌ ಅವರ ಕೊಚ್ಚದಯಾನ್‌ ಮತ್ತು ವಿಐಪಿ-2 ಸಿನಿಮಾ ನಿರ್ಮಾಣ ಕಾರ್ಯದಲ್ಲಿ  ಸೌಂದರ್ಯಾ, ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿದ್ದಳು.

ಸೌಂದರ್ಯಾ ಮದುವೆಯಾಗಲಿರುವ ವಿಶಾಖನ್‌ 2018ರಲ್ಲಿ ತಮಿಳು ಥ್ರಿಲ್ಲರ್‌ ವಂಜಗಾರ್‌ ಉಳಗಂ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಈತ ಫಾಮಾಸುಟಿಕಲ್‌ ಕಂಪೆನಿಯೊಂದರ ಮಾಲಕ.

ಸೌಂದರ್ಯಾ ಈಚೆಗೆ ತನ್ನ ತಾಯಿ ಲತಾ ರಜನಿಕಾಂತ್‌ ಜತೆಗೆ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ತನ್ನ ಮದುವೆ ಕರೆಯೋಲೆ ಪತ್ರವನ್ನು ದೇವರ ಮುಂದಿಟ್ಟು ಪೂಜಿಸಿದ್ದಳು.

No Comments

Leave A Comment