Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

Vice Chief of Naval Staf ಆಗಿ ಅಶೋಕ್‌ ಕುಮಾರ್‌ ಅಧಿಕಾರ ಸ್ವೀಕಾರ

ಹೊಸದಿಲ್ಲಿ : ವೈಸ್‌ ಅಡ್ಮಿರಲ್‌ ಜಿ ಅಶೋಕ್‌ ಕುಮಾರ್‌ ಅವರಿಂದು ವೈಸ್‌ ಚೀಫ್ ಆಫ್ ನೇವಲ್‌ ಸ್ಟಾಫ್ ಆಗಿ ಅಧಿಕಾರ ಸ್ವೀಕರಿಸಿದರು.

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ದಿಲ್ಲಿಯ ಸೌತ್‌ ಬ್ಲಾಕ್‌ನಲ್ಲಿಂದು ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ತನ್ನ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ಇಂದು ಮಧ್ಯಾಹ್ನ ಮುಂಬಯಿಗೆ ತೆರಳಲಿದ್ದು ನಾಳೆ ಗುರುಆವರ ವೆಸ್ಟರ್ನ್ ನೇವಲ್‌ ಕಮಾಂಡ್‌ ನಲ್ಲಿ ಕಮಾಂಡಿಂಗ್‌ ಇನ್‌ ಚೀಫ್ ಫ್ಲ್ಯಾಗ್‌ ಆಫೀಸರ್‌ ಆಗಿ ಅಧಿಕಾರ ವಹಿಸುವರು.

ವೈಸ್‌ ಅಡ್ಮಿರಲ್‌ ಕುಮಾರ್‌ ಅವರು ಪುಣೆಯ ಖಡಕ್‌ವಾಸ್ಲಾ ದಲ್ಲಿನ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿ.ಇವರನ್ನು 1982ರ ಜುಲೈ 1ರಂದು ಭಾರತೀಯ ನೌಕಾಪಡಯೆ ಕಾರ್ಯನಿವಾರ್ಹಕ ಪೀಠಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

No Comments

Leave A Comment