Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಮನೆಕೆಲಸದ ಬಾಲಕಿಗೆ ಕಿರುಕುಳ: ನಟಿ ಭಾನುಪ್ರಿಯಾ ವಿರುದ್ಧ ದೂರು ದಾಖಲು

ಆಂಧ್ರಪ್ರದೇಶ: ನಟಿ ಭಾನುಪ್ರಿಯಾ ತಮ್ಮ 14 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರು ಸಮಲ್‍ಕೋಟ್ ಪೊಲೀಸ್ ಠಾಣೆಯಲ್ಲಿ ಭಾನು ಪ್ರಿಯಾ ವಿರುದ್ಧ ದೂರು ದಾಖಲಾಗಿದೆ.

ಮನೆಕೆಲಸಕ್ಕಾಗಿ ತನ್ನ 14 ವರ್ಷದ ಮಗಳನ್ನು ಚೆನ್ನೈಗೆ ಕರೆದೊಯ್ದು ಕಿರುಕುಳ ನೀಡಿದ್ದಾಗಿ ದೂರು ನೀಡಿರುವ ಮಹಿಳೆ ಆರೋಪಿಸಿದ್ದಾರೆ.  ಚೆನ್ನೈನಲ್ಲಿರುವ ಭಾನುಪ್ರಿಯಾ ನಿವಾಸದಲ್ಲಿ 14 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಾರೆ. ಭಾನುಪ್ರಿಯಾ ಸಹೋದರ ಗೋಪಾಲ ಕೃಷ್ಣ ಎಂಬುವವರು ಆ ಬಾಲಕಿಗೆ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ.

ಅನಾಮಧೇಯ ಕರೆಯ ಮೂಲಕ ತಮಗೆ ಈ ಸಂಗತಿ ಗೊತ್ತಾಗಿದ್ದಾಗಿ ಬಾಲಕಿಯ ತಾಯಿ ಪ್ರಭಾವತಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಭಾನುಪ್ರಿಯಾ ಬಾಲಕಿಯು ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ, ಆದರೆ ಇನ್ನೂ ಬಾಲಕಿ ಅವರ ಮನಯಲ್ಲಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment