Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಮತ್ತೊಂದು ದುರಂತ? ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ

ಚಿಕ್ಕಬಳ್ಳಾಪುರ: ಸುಳ್ವಾಡಿ ದುರಂತ ಮಾಸುವ ಮುನ್ನವೇ ಇದೀಗ ಗಂಗಮ್ಮ ದೇಗುಲದಲ್ಲಿ ವಿತರಿಸಿದ್ದ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ ಕವಿತಾ (28ವರ್ಷ) ಎಂಬ ಯುವತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಅಲ್ಲದೇ ಆರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಚಿಂತಾಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಶುಕ್ರವಾರ ಗಂಗಮ್ಮ ದೇಗುಲದಲ್ಲಿ ಕೇಸರಿಬಾತ್ ವಿತರಿಸಿದ್ದರು. ಪ್ರಸಾದ ಸೇವಿಸಿದ್ದ ಕವಿತಾ ಎಂಬಾಕೆ ಶನಿವಾರ ಸಾವನ್ನಪ್ಪಿದ್ದು, ಗಾನವಿ, ಶರಣ, ಗಂಗಾಧರ, ರಾಜಾ, ರಾಧಾ ಸೇರಿದಂತೆ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ ಗಂಗಮ್ಮ ಗುಡಿ ಅರ್ಚಕನನ್ನು ಚಿಂತಾಮಣಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮದ ವರದಿ ವಿವರಿಸಿದೆ. ಆದರೆ ದೇವಸ್ಥಾನದ ಪ್ರಸಾದ ಸೇವಿಸಿ ಆಕೆ ಸಾವನ್ನಪ್ಪಿಲ್ಲ, ದೇವಾಲಯದ ಹೊರಭಾಗದಲ್ಲಿ ಸೇವಿಸಿದ್ದ ತಿಂಡಿಯಿಂದ ಸಾವನ್ನಪ್ಪಿರಬಹುದು ಎಂದು ಮತ್ತೊಂದು ವರದಿ ಹೇಳಿದೆ.

No Comments

Leave A Comment