Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಒಡಿಶಾದಲ್ಲಿ ಟ್ರಕ್‌ ಮಗುಚಿ ಬಿದ್ದು 8 ಸಾವು; 25 ಮಂದಿಗೆ ಗಂಭೀರ ಗಾಯ

ಕಂಧಮಾಲ್‌ : ಒಡಿಶಾದ ಕಂಧಮಾಲ್‌ ಜಿಲ್ಲೆಯಲ್ಲಿ ಟ್ರಕ್‌ ಮಗುಚಿ ಬಿದ್ದ ದುರಂತದಲ್ಲಿ  ಎಂಟು ಮಂದಿ ಮಡಿದು ಇತರ 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಕಂಧಮಾಲ್‌ ಜಿಲ್ಲೆಯ ಬಲಿಗುಡ ಸಮೀಪದ ಪೋಯಿಗುಡ ಎಂಬಲ್ಲಿ ಈ ದುರ್ಘ‌ಟನೆ ನಿನ್ನೆ ಸೋಮವಾರ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಬ್ರಹ್ಮಣಿಗಾನ್‌ ಮತ್ತು ಬೆರಾಂಪುರ ದಲ್ಲಿನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

No Comments

Leave A Comment