Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಬೋಟ್‌ ಮುಳುಗಿ ಎಂಟು ಮಂದಿ ಜಲಸಮಾಧಿ

ಕಾರವಾರ: ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ದೇವರ ಜಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಯಾಂತ್ರಿಕ ಬೋಟ್‌ ಮುಳುಗಿ ಮೂರು ವರ್ಷದ ಮಗು ಸೇರಿ ಎಂಟು ಮಂದಿ ಸೋಮವಾರ ಮೃತಪಟ್ಟಿದ್ದಾರೆ.

ಇನ್ನೂ ಏಳು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.ಕೂರ್ಮಗಡ ಮತ್ತು ದೇವಭಾಗ ಬೀಚ್‌ ನಡುವೆ ಕಾಳಿನದಿ-ಸಮುದ್ರ ಸಂಗಮ ಸ್ಥಳದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಮೃತರನ್ನು ಮುಂಬೈ ನಿವಾಸಿ, ಮೂಲತಃ ಕಾರವಾರದ ನಿಲೇಶ್‌ ರೋಹಿದಾಸ ಫ‌ಡೆ°àಕರ್‌ (38), ಕಾರವಾರದ ಕಡವಾಡದ ಜಯಶ್ರೀ ಯಾನೆ ಮೀನಾಕ್ಷಿ ಕೋಟಾರಕರ್‌(55), ಗಣಪತಿ ಕೋಠಾರಕರ್‌(70), ಗೋವಾ ಪೊಂಡಾದ ಗೀತಾ ಜೆ. ತಳೇಕರ್‌(48), ಹಾವೇರಿ ಜಿಲ್ಲೆ ಶಿಗ್ಗಾವಿಯ ಹೊಸೂರಿನ ಭಾರತಿ ಪರಶುರಾಮ (33), ಬಾಲಕ ಅರುಣ್‌ ಸೋಮಪ್ಪ (ಒಂದೂವರೆ ವರ್ಷ) ಹಾಗೂ ಮಂಜವ್ವ ಸೋಮಪ್ಪ (30) ಹಾಗೂಕಾರವಾರ ನಿವಾಸಿ ಮೂಲತಃ ಕೊಪ್ಪಳ ಜಿಲ್ಲೆ ಕುಷ್ಠಗಿಯ ಅಣ್ಣಕ್ಕ ಮಲ್ಲಪ್ಪಾ ಇಂಗಳದಾಳ (55)ಎಂದು ಗುರುತಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

7 ಜನ ಆಸ್ಪತ್ರೆಗೆ ದಾಖಲು: “ದೇವಭಾಗ ಅಡ್ವೆಂಚರ್‌ ಬೋಟಿಂಗ್‌ ಸೆಂಟರ್‌’ ಎಂದು ಬರೆದಿದ್ದ ಬೋಟ್‌ ಮುಳುಗುತ್ತಿದ್ದಂತೆ ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಈಜಿ ಪಾರಾದರು. ಹಾಗೆಯೇ ಹನ್ನೆರಡು ಜನರನ್ನು ರಕ್ಷಿಸಲಾಗಿದೆ. ಈ ಪೈಕಿ ಏಳು ಜನರನ್ನು ಕಾರವಾರ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ಜನರ ಪ್ರಯಾಣ?
ಸಮುದ್ರ ಅಬ್ಬರಿಸುತ್ತಿತ್ತು. ದೊಡ್ಡ ದೊಡ್ಡ ಅಲೆಗಳು ಆಗಾಗ ಏಳುತ್ತಿದ್ದವು.ಅಲ್ಲದೇ 12 ಜನರನ್ನು ಹಾಕಬೇಕಾದ ಬೋಟ್‌ನಲ್ಲಿ 33 ಜನರನ್ನು ಹಾಕಿದ್ದೇ ಬೋಟ್‌ ನಿಯಂತ್ರಣ ಕಳೆದುಕೊಳ್ಳಲು ಕಾರಣ ಎನ್ನಲಾಗುತ್ತಿದೆ. ಲೈಫ್‌ ಜಾಕೆಟ್‌ಗಳನ್ನು ಬೋಟ್‌ನಲ್ಲಿದ್ದ ಪ್ರಯಾಣಿಕರಿಗೆ ಕಡ್ಡಾಯವಾಗಿ ನೀಡಿದ್ದರೆ ದುರಂತ ತಪ್ಪುತ್ತಿತ್ತು ಎನ್ನಲಾಗುತ್ತಿದೆ. ಹದಿನೆಂಟು ವರ್ಷ ಹಿಂದೆಯೂ ಇದೇ ರೀತಿ ದುರಂತ ಸಂಭವಿಸಿ ಮೂವರು ಮೃತಪಟ್ಟಿದ್ದರು.

No Comments

Leave A Comment