Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಮಲೇಷ್ಯಾ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಸೈನಾಗೆ ಸೋಲು, ಭಾರತದದ ಅಭಿಯಾನ ಅಂತ್ಯ

ಕೌಲಾಲಾಂಪುರ್: ಮಲೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಸೆಮಿ ಫೈನಲ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಪರಾಜಿತರಾಗಿದ್ದಾರೆ. ಇದರೊಡನೆ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸೈನಾ ಸ್ಪೇನ್ ನ ವಿಶ್ವ ನಂ.೬ ಕೆರೊಲಿನಾ ಮರಿನ್ ಅವರೆದುರು ಸೈನಾ ಶರಣಾಗಿದ್ದಾರೆ.  40 ನಿಮಿಷದ ಪಂದ್ಯದ ವೇಳೆ 16-21, 13-21ರ ನೇರ ಸೆಟ್ ಗಳಿಂದ ಸೈನಾ ಪರಾಜಿತರಾದರು.

ಇದಕ್ಕೆ ಮುನ್ನ ಸೈನಾ ನೆಹ್ವಾಲ್ ಇದೇ ಪಂದ್ಯಾವಳಿಯ 2011ರ ಆವೃತ್ತಿಯಲ್ಲಿ ರನ್ನರ್ ಅಪ್ ಹಾಗೂ 2017ರಲ್ಲಿ ಪ್ರಶಸ್ತಿ ವಿಜೇತೆಯಾಗಿ ಹೊರಹೊಮ್ಮಿದ್ದರು.

ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿಭಾರತದ ಕಿದಂಬಿ ಶ್ರೀಕಾಂತ್ ದಕ್ಷಿಣ ಕೊರಿಯಾದ ಸನ್ ವಾನ್ ಹೋ ಅವರಿಗೆ ಶರಣಾಗುವ ಮೂಲಕ ನಿರಾಶೆ ಮೂಡಿಸಿದ್ದಾರೆ.

No Comments

Leave A Comment