Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

UP : ಮನೆಯಲ್ಲಿ ಒಂಟಿಯಾಗಿದ್ದ ಯುವತಿಯ ಮೇಲೆ ಗ್ಯಾಂಗ್‌ ರೇಪ್‌

ಮುಜಫ‌ರನಗರ : ಉತ್ತರ ಪ್ರದೇಶದ ಮುಜಫ‌ರನಗರದಲ್ಲಿ  22ರ ಹರೆಯದ ತರುಣಿಯ ಮೇಲೆ ಇಬ್ಬರು ಪುರುಷರು ಗ್ಯಾಂಗ್‌ ರೇಪ್‌ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಕ್ರೋಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಖೇರಿ ಫಿರೋಜಾಬಾದ್‌ ನಲ್ಲಿನ ತನ್ನ ಮನೆಯಲ್ಲಿ ಯುವತಿಯು ಒಂಟಿಯಾಗಿದ್ದಾಗ ಇಬ್ಬರು ಕಾಮಾಂಧರು ಆಕೆಯ ಮನೆಗೆ ನುಗ್ಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು.

ತರುಣಿಯ ತಂದೆ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತನ್ನದೇ ಗ್ರಾಮದ ಗೌರವ್‌ ಮತ್ತು ರವಿ ಎಂಬವರು ಈ ಕೃತ್ಯ ಎಸಗಿದ್ದಾರೆ; ಘಟನೆ ನಡೆದಾಗ ನಾವು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಅತ್ಯಾಚಾರದ ಬಗ್ಗೆ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಆರೋಪಿಗಳು ತರುಣಿಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

20-25ರ ವಯಸ್ಸಿನವರಾಗಿರುವ ಆರೋಪಿ ಗೌರವ್‌ ಮತ್ತು ರವಿ ಪರಾರಿಯಾಗಿದ್ದು ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ತರುಣಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

No Comments

Leave A Comment