Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಇಂಡೋನೇಶ್ಯ ಲಯನ್‌ ಏರ್‌ ಜೆಟ್‌ ವಿಮಾನದ voice recorder ಪತ್ತೆ

ಜಕಾರ್ತ : ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಹೊಚ್ಚ ಹೊಸ ಲಯನ್‌ ಏರ್‌ ಜೆಟ್‌ ವಿಮಾನದ ಕಡು ಕಿತ್ತಳೆ ಬಣ್ಣದ cockpit voice recorder ಇಂದು ಸೋಮವಾರ ನಸುಕಿನ ವೇಳೆ ಪತ್ತೆಯಾಗಿದೆ.

ಬೋಯಿಂಗ್‌ 737 ಮ್ಯಾಕ್ಸ್‌  ಜೆಟ್‌ ವಿಮಾನವು ಜಕಾರ್ತದಿಂದ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ  ರಾಡಾರ್‌ನಿಂದ ನಾಪತ್ತೆಯಾಗಿತ್ತು. ವಿಮಾನದ ಪೈಲಟ್‌ಗಳು ರಾಜಧಾನಿಗೆ ಮರಳುವುದಕ್ಕೆ ಅನುಮತಿ ಕೋರಿದ ಕೆಲವೇ ಕ್ಷಣಗಳಲ್ಲಿ ಅದು ಜಾವಾ ಸಮುದ್ರಕ್ಕೆ ಬಿದ್ದಿತ್ತು. ಪರಿಣಾವಾಗಿ ವಿಮಾನದಲ್ಲಿದ್ದ 189 ಪ್ರಯಾಣಿಕರು ಮೃತಪಟ್ಟಿದ್ದರು.

ಕಳೆದ ನವೆಂಬರ್‌ ನಲ್ಲಿ ವಿಮಾನ ಫ್ಲೈಟ್‌ ರೆಕಾರ್ಡರ್‌ ಪತ್ತೆಯಾಗಿದ್ದ ತಾಣದಿಂದ 10 ಮೀಟರ್‌ ದೂರದಲ್ಲೇ ಇದೀಗ cockpit voice recorder  ಪತ್ತೆಯಾಗಿದೆ. ಇದು ಎರಡು ತುಂಡಾಗಿದೆಯಾದರೂ ಅದಿನ್ನೂ ಬಳಕೆಗೆ ಯೋಗ್ಯವಿದೆ ಎಂದು ನಾವು ಹಾರೈಸುತ್ತೇವೆ ಎಂಬುದಾಗಿ ಇಂಡೋನ್ಯೆಶ್ಯದ ರಾಷ್ಟ್ರೀಯ ವಾಯು ಸಾರಿಗೆ ಸುರಕ್ಷಾ ಸಮಿತಿಯ ಉಪ ಮುಖ್ಯಸ್ಥ ಹ್ಯಾರಿ ಸಾತ್ಮಿಕೋ ತಿಳಿಸಿದ್ದಾರೆ.

Cockpit voice recorder  ಪತ್ತೆಯಾಗಿರುವ ಪಕ್ಕದಲ್ಲೇ ಇನ್ನಷ್ಟು ಮಾನವ ಅವಶೇಷಗಳು ಪತ್ತೆಯಾಗಿವೆ ಎಂದವರು ಹೇಳಿದರು. ಆದರೆ ಹೆಚ್ಚಿನ ವಿವರ ನೀಡಲಿಲ್ಲ.

ಈಗ ದೊರಕಿರುವ voice recorder ನಿಂದಾಗಿ ಹೊಚ್ಚ ಹೊಸ ಲಯನ್‌ ಜೆಟ್‌ ವಿಮಾನ  ಪತನಗೊಳ್ಳಲು ಕಾರಣವೇನು ಎನ್ನುವುದು ಗೊತ್ತಾದೀತು ಎಂದವರು ಹೇಳಿದರು.

ಈ ಮೊದಲು ಸಿಕ್ಕಿದ್ದ ವಿಮಾನ ಫ್ಲೈಟ್‌ ಡಾಟಾ ರೆಕಾರ್ಡರ್‌ ಮೂಲಕ ವಿಮಾನದ ವೇಗ, ಹಾರಾಟದ ಎತ್ತರ ಮತ್ತು ವಿಮಾನದ ದಿಕ್ಕು ಗೊತ್ತಾಗಿತ್ತು. ಕಳೆದ ಅಕ್ಟೋಬರ್‌ 29ರಂದು ಈ ದುರ್ಘ‌ಟನೆ ಸಂಭವಿಸಿತ್ತು.

ಈ ನತದೃಷ್ಟ ಹಾರಾಟಕ್ಕೆ ಮೊದಲೇ ವಿಮಾನದಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳು ಪದೇ ಪದೇ ಕಂಡು ಬಂದಿದ್ದವು. ಆಗಲೇ ವಿಮಾನವನ್ನು ಬಳಕೆಯಿಂದ ಹೊರಗಿಡುವ ಪ್ರಸ್ತಾವ ಇತ್ತಾದರೂ ಅದನ್ನು ಅನುಷ್ಠಾನಿಸಿರಲಿಲ್ಲ.

No Comments

Leave A Comment