Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಸೇತುವೆಯಿಂದ ನದಿಗುರುಳಿದ ಬೊಲೆರೋ ,ಮಹಿಳೆ ಸಾವು

ಕಿನ್ನಿಗೋಳಿ: ಮದುವೆಗೆಂದು ಕುಟುಂಬ ಸಮೇತ ಬೊಲೆರೋ ವಾಹನದಲ್ಲಿ ತೆರಳಿದ್ದವರು ವಾಹನ ಸಮೇತ  ಸೇತುವೆಯಿಂದ ಕೆಳಕ್ಕುರುಳಿದ ಘಟನೆ ನಡೆದಿದೆ. ವಾಹನದಲ್ಲಿದ್ದ ಬೋಳ ಗ್ರಾಮದ ಮಹಿಳೆ ಡಯಾನಾ (45ವರ್ಷ) ಮೃತಪಟ್ಟಿದ್ದಾರೆ.

ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್ ಅವರು ಕುಟುಂಬ ಸಮೇತ ಮಂಗಳೂರಿಗೆ ಮದುವೆ  ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ವಾಹನದಲ್ಲಿ ಸ್ಟ್ಯಾನಿ ಅವರ ಪತ್ನಿ ಡಯಾನಾ, ಮಕ್ಕಳಾದ ಶೆಲ್ಡನ್ ಮತ್ತು ಶರ್ಮನ್ ಜೊತೆಗಿದ್ದರು. ಸಂಕಲಕರಿಯ ಸಮೀಪ ಶಾಂಭವಿ ನದಿ ಸೇತುವೆ ಮೇಲಿಂದ ಇವರಿದ್ದ ಬುಲೇರೋ ವಾಹನ ನದಿಗೆ ಬಿದ್ದಿದೆ.


ನದಿಗುರುಳಿದ ವಾಹನ ಕಂಡು ಸ್ಥಳೀಯರು ನೀರಿಗೆ ಧುಮುಕಿ ಮೂವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಡಯಾನಾ ಅವರು ಮೃತಪಟ್ಟಿದ್ದಾರೆ. 

ಮೃಪಟ್ಟ ಮಹಿಳೆ ಡಯಾನಾರ ಶವ ಕಿನ್ನಿಗೋಳಿ ಆಸ್ಪತ್ರೆಯಲ್ಲಿಗೆ ಸ್ಥಳಾಂತರಿಸಲಾಗಿದೆ. ಸ್ಥಳೀಯರಿಂದ ರಕ್ಷಿಸಲಾದ ಚಾಲಕ ಪತಿ ಸ್ಟೇನಿ ಮಸ್ಕರೇನಸ್,ಮಕ್ಕಳಾದ ಶರ್ಮನ್, ಶೆಲ್ಡನ್ ರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇತುವೆಯ ಮಧ್ಯಭಾಗದಲ್ಲಿ ನದಿಗೆ ಬಿದ್ದುದರಿಂದ ಕಾರ್ಕಳ ಹಾಗೂ ಮುಲ್ಕಿ ಪೊಲೀಸರ ಚರ್ಚೆಯ ಬಳಿಕ ಕೊನೆಗೂ ಕಾರ್ಕಳ ಪೊಲೀಸರು  ದೂರು ದಾಖಲು ಮಾಡಿದ್ದಾರೆ.

No Comments

Leave A Comment