Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಅಯೋಧ್ಯೆ ಕೇಸ್‌: ಪೀಠದಿಂದ ಹಿಂದೆ ಸರಿದ ಜ.ಲಲಿತ್‌; ವಿಚಾರಣೆ ಜ.29ಕ್ಕೆ

ಹೊಸದಿಲ್ಲಿ : ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ಮಾಲಕತ್ವ ವಿವಾದದ ವಿಚಾರಣೆ ನಡೆಸುವ ಸಂವಿಧಾನ ಪೀಠದ ಭಾಗವಾಗಿದ್ದ ಜಸ್ಟಿಸ್‌ ಯು ಯು ಲಲಿತ್‌ ಅವರು ಇಂದು ಗುರುವಾರ ಪೀಠದಿಂದ ಹಿಂದೆ ಸರಿದ್ದಾರೆ.

ಪರಿಣಾಮವಾಗಿ ಸಂವಿಧಾನ ಪೀಠವನ್ನು ಪುನರ್‌ರೂಪಿಸಬೇಕಿರುವ ಅನಿವಾರ್ಯತೆ ಸುಪ್ರೀಂ ಕೋರ್ಟಿಗೆ ಎದುರಾಗಿದೆ. ಹಾಗಾಗಿ ಹೊಸ ಪೀಠವು ಜನವರಿ 29ರಂದು ಪ್ರಕರಣದ ವಿಚಾರಣೆ ನಡೆಸುತ್ತದೆ.

ಜಸ್ಟಿಸ್‌ ಲಲಿತ್‌ ಅವರು ಈ ಹಿಂದೆ 1994ರಲ್ಲಿ  ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ  ಕಲ್ಯಾಣ್‌ ಸಿಂಗ್‌ ಅವರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದರು ಎಂಬ ವಿಷಯವನ್ನು ಮುಸ್ಲಿಂ ಕಕ್ಷಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೋಯ್‌ ನೇತೃತ್ವದ ಪೀಠಕ್ಕೆ ತಂದರು.

ಜಸ್ಟಿಸ್‌ ಯು ಯು ಲಲಿತ್‌ ಅವರು ಪೀಠದಿಂದ ಹಿಂದೆ ಸರಿಯಬೇಕೆಂದು ನಾನು ಬಯಸುತ್ತಿಲ್ಲ ಎಂದು ಹೇಳಿದರೂ ಲಲಿತ್‌ ಅವರು ಒಡನೆಯೇ ತಾನು ಸಾಂವಿಧಾನಿಕ ಪೀಠದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದರು.

No Comments

Leave A Comment