Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ದುಬೈನಲ್ಲಿ ರಮ್ಯಾ ಪ್ರತ್ಯಕ್ಷ; ಟ್ರಿಪ್ ಫೋಟೋ ವೈರಲ್

ಬೆಂಗಳೂರು: ಈ ಹಿಂದೆ ನಟ ಅಂಬರೀಶ್ ಅವರ ಅಂತ್ಯ ಸಂಸ್ಕಾರಕ್ಕೆ ಗೈರಾಗಿ ಅವರ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ನಟಿ ಹಾಗೂ ಕಾಂಗ್ರೆಸ್ ಪಕ್ಷ ಸಾಮಾಜಿಕ ತಾಲತಾಣ ವಿಭಾಗ ಮುಖ್ಯಸ್ಥೆ ರಮ್ಯಾ ಅವರು ದುಬೈ ಪ್ರವಾಸದ ಫೋಟೋಗಳು ವೈರಲ್ ಆಗುತ್ತಿವೆ.

ಹೌದು..ಈ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ರಮ್ಯಾ ಅವರ ದುಬೈ ಪ್ರವಾಸದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂಬರೀಶ್ ಅಂತಿಮ ದರ್ಶನ ಮಾಡದ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ರಮ್ಯಾ ರಾತ್ರೋರಾತ್ರಿ ಮಂಡ್ಯದ ಮನೆ ಕಾಲಿ ಮಾಡಿದ್ದರು. ಅಂದು ಅನಾರೋಗ್ಯದ ಕಾರಣ ನೀಡಿದ್ದ ರಮ್ಯಾ ತಮ್ಮ ಕಾಲಿನ ಗಾಯದ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು.

ಇದಾದ ಬಳಿಕ ಸಾಮಾಜಿಕ ಜಾಲತಾಣಗಳಿಂದಲೂ ದೂರವಿದ್ದ ರಮ್ಯಾ, ಇದೀಗ ತಿಂಗಳ ಬಳಿಕ ದುಬೈನಲ್ಲಿ ಪ್ರತ್ಯಕ್ಷರಾಗಿದ್ದಾರೆ. ದುಬೈನಲ್ಲಿರುವ ಅವರ ಫೋಟೋವೊಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. ರಮ್ಯಾ ಗಗನ ಚುಂಬಿಗಳ ನಗರ, ಭೂ ಲೋಕದ ಸ್ವರ್ಗದಂತಿರುವ ದುಬೈನಲ್ಲಿ ಖಾಸಗಿ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆ ರಾಜ್ಯ ಸಚಿವರೊಬ್ಬರ ಸೋಹೋದರ ಹಾಜರಿರುವ ಫೋಟೋ​ ವೈರಲ್ ಆಗುತ್ತಿದೆ.

No Comments

Leave A Comment