Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಕುಂದಾಪುರ: ಭಾರತ್ ಬಂದ್ ವೇಳೆ ಒತ್ತಾಯ ಪೂರ್ವಕವಾಗಿ ಅಂಗಡಿ ಮುಚ್ಚಿಸಲು ಮುಂದಾದ ಪ್ರತಿಭಟನಾ ನಿರತರಿಗೆ ವ್ಯಾಪಾರಿಯೊಬ್ಬರು ಭರ್ಜರಿ ಕ್ಲಾಸ್ ತೆಗೆದುಕೊಂಡ ಘಟನೆ ಕುಂದಾಪುರದ ಗುಜ್ಜಾಡಿಯಲ್ಲಿ ನಡೆದಿದೆ.

ಕೇಂದ್ರ ಸರ್ಕಾರದ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟ ಸಂಘಟನೆಗಳು (ಎಡಪಕ್ಷಗಳು) ಜ.8-9 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದವು. ದೇಶಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ಹಲವೆಡೆ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನ ನಡೆದಿರುವ ವರದಿಯೂ ಆಗಿದ್ದು, ಕುಂದಾಪುರದಲ್ಲಿ ಇಂಥಹದ್ದೇ ಘಟನೆ ನಡೆದಿದೆ. 

ಒತ್ತಾಯಪೂರ್ವಕವಾಗಿ ಅಂಗಡಿ ಮುಚ್ಚಿಸಲು ಬಂದ ಪ್ರತಿಭಟನಾ ನಿರತರನ್ನು ಹಿಗ್ಗಾ-ಮುಗ್ಗಾ ಝಾಡಿಸಿದ ವ್ಯಾಪಾರಿ ” ಒಳ್ಳೆಯದಕ್ಕೆ ಪ್ರತಿಭಟನೆ ನಡೆಸಿ ಬೆಂಬಲ ಕೊಡುತ್ತೇವೆ, ಹೋಗಿ ಶಬರಿಮಲೆಯಲ್ಲಿ 1,000 ವರ್ಷದಿಂದ ನಡೆದುಬಂದ ಸಂಪ್ರದಾಯ ಮುರಿಯುತ್ತಿರುವುದನ್ನು ಪ್ರತಿಭಟಿಸಿ ಬೆಂಬಲಿಸುತ್ತೇವೆ, ನಾವು ಕಮ್ಯುನಿಷ್ಟರಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

“ದೇಶದ ಬಗ್ಗೆ ಚಿಂತನೆ ಮಾಡಿ ಮೋದಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದೆ. ಬನ್ನಿ 2014-2019 ವರೆಗೆ ಬೆಲೆ ಇಳಿಕೆಯಾಗಿರುವ ಅಂಕಿ-ಅಂಶ ನೀಡುತ್ತೇನೆ” ಎಂದು  ವ್ಯಾಪಾರಿ ಪ್ರತಿಭಟನಾ ನಿರತರ ಬೆವರಿಳಿಸಿದ್ದಾರೆ.

No Comments

Leave A Comment