Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಚಲಿಸುತ್ತಿದ್ದ ರೈಲಿನಲ್ಲಿ ಮಾಜಿ ಬಿಜೆಪಿ ಶಾಸಕನ ಬರ್ಬರ ಹತ್ಯೆ

ಅಹಮದಾಬಾದ್‌: ಗುಜಾರಾತ್‌ನ ಮಾಜಿ ಬಿಜೆಪಿ ಶಾಸಕ ಜಯಂತಿಲಾಲ್‌ ಭಾನುಶಾಲಿ ಅವರನ್ನು  ಸೋಮವಾರ ರಾತ್ರಿ ಚಲಿಸುತ್ತಿರುವ ರೈಲಿನಲ್ಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಭುಜ್‌ ನಿಂದ ಅಹಮದಾಬಾದ್‌ಗೆ ಸಂಚರಿಸುತ್ತಿದ್ದ ಸಯಾಜಿ ನಗರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಹತ್ಯೆ ನಡೆದಿದೆ.

ಕಟಾರಿಯಾ ಮತ್ತು ಸುರ್ಬಾರಿ ನಿಲ್ದಾಣಗಳ ಮಧ್ಯೆ ಎಸಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಭಾನುಶಾಲಿ ಅವರನ್ನು ಹತ್ಯೆಗೈಯಲಾಗಿದೆ. ಒಂದು ಗುಂಡು ಎದೆಗೆ ಹೊಕ್ಕಿದ್ದರೆ ,ಇನ್ನೊಂದು ಕಣ್ಣನ್ನು ಸೀಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ರೈಲನ್ನು 2 ಗಂಟೆಗೂ ಹೆಚ್ಚು ಕಾಲ ಮಾಲಿಯಾ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ.

ಕಳೆದ ವರ್ಷ ಮಹಿಳೆಯೊಬ್ಬರು ಭಾನುಶಾಲಿ ಅವರ ವಿರುದ್ಧ ಮಹಿಳೆಯೊಬ್ಬರು ರೇಪ್‌ ಆರೋಪ ಮಾಡಿದ್ದರು.

No Comments

Leave A Comment