Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌

ಹೊಸದಿಲ್ಲಿ : ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರಿಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಷಯವನ್ನು ರಾಕೇಶ್‌ ಅವರ ಪುತ್ರ, ಬಾಲಿವುಡ್‌ ಸೂಪರ್‌ ಹಿಟ್‌ ನಟ ಹೃತಿಕ್‌ ರೋಶನ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ  ಸುದೀರ್ಘ‌ ಪೋಸ್ಟ್‌ ಜತೆಗೆ ತಂದೆಯೊಂದಿಗಿನ ತನ್ನ ಚಿತ್ರವೊಂದರ ಮೂಲಕ ಹಂಚಿಕೊಂಡಿದ್ದಾರೆ.

ಹೃತಿಕ್‌ ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ : ಜತೆಯಾಗಿ ಒಂದು ಫೋಟೋ ತೆಗೆದುಕೊಳ್ಳೋಣ ಎಂದು ತಂದೆಯನ್ನು ಕೇಳಿಕೊಂಡೆ. ”ಸರ್ಜರಿ ದಿನ ಅವರಿಗೆ ಜಿಮ್‌ ಮಿಸ್‌ ಆಗುತ್ತೆ ಅಂತ ಗೊತ್ತಿತ್ತು. ತಂದೆ ನಿಜಕ್ಕೂ ಓರ್ವ ಬಲಿಷ್ಠ ಮನುಷ್ಯ. ಕೆಲ ವಾರಗಳ ಹಿಂದೆ ಅವರಿಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಆದರೂ ಆತ ಫ‌ುಲ್‌ ಜೋಶ್‌ ನಲ್ಲಿದ್ದಾರೆ – ಕ್ಯಾನ್ಸರ್‌ ವಿರುದ್ಧ ಹೋರಾಡಲು ! ಅವರಂತಹ ಓರ್ವ ಲೀಡರ್‌ ನಮಗೆ ಸಿಕ್ಕಿರುವುದು ನಿಜಕ್ಕೂ ನಮ್ಮ ಕುಟುಂಬದ ಅದೃಷ್ಟ. ಲವ್‌ ಯೂ ಡ್ಯಾಡ್‌ ”.

ಇಡಿಯ ರೋಶನ್‌ ಕುಟುಂಬವೇ ಫಿಟ್‌ನೆಸ್‌ ಗೀಳು ಹೊಂದಿದ್ದು ಅವರೆಂದೂ ಜಿಮ್‌ ತಪ್ಪಿಸಿಕೊಳ್ಳುವುದಿಲ್ಲ; ಹಾಗೆಯೇ ಸಂಪೂರ್ಣ ಆರೋಗ್ಯಕರ ಜೀವನಶೈಲಿ ಅವರದ್ದಾಗಿದೆ.

ಅಂದ ಹಾಗೆ ಬಾಲಿವುಡ್‌ನ‌ಲ್ಲಿ ಕ್ಯಾನ್ಸರ್‌ ಪೀಡಿತ ತಾರೆಯರ ಸಂಖ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿದೆ. ಇರ್ಫಾನ್‌ ಖಾನ್‌, ಸೋನಾಲಿ ಬೇಂದ್ರೆ, ನಫೀಸಾ ಅಲಿ, ತಾಹಿರಾ ಕಶ್ಯಪ್‌ ಬಳಿಕ ಈಚೆಗೆ ರಿಷಿ ಕಪೂರ್‌ ಕೂಡ ಅಧಿಕೃತವಾಗಿ ಬಹಿರಂಗಪಡಿಸದ ಕ್ಯಾನ್ಸರ್‌ ಪೀಡಿತರೆಂಬುದು ಗೊತ್ತಾಗಿದೆ. ರಿಷಿ ಪ್ರಕೃತ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No Comments

Leave A Comment