Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

IT ದಾಳಿ:ಪತ್ತೆಯಾದ ಅಘೋಷಿತ ಸಂಪತ್ತು ಎಷ್ಟು ಗೊತ್ತೆ?

ಬೆಂಗಳೂರು: ಸ್ಯಾಂಡಲ್‌ಪುಡ್‌ ದಿಗ್ಗಜರ ಮೇಲೆ ನಡೆದ ಐಟಿ ದಾಳಿಯಲ್ಲಿ  ಒಟ್ಟು 109 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎನ್ನುವ ವಿವರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಅಧಿಕೃತವಾಗಿ ಭಾನುವಾರ ಮಾಧ್ಯಮ ಪ್ರಕಟಣೆಯಲ್ಲಿ  ಬಹಿರಂಗ ಪಡಿಸಿದ್ದಾರೆ.

21 ಸ್ಥಳಗಳಲ್ಲಿ  ಕರ್ನಾಟಕ ಮತ್ತು ಗೋವಾ ವಲಯದ 180 ಮಂದಿ ಐಟಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ  2.85 ಕೋಟಿ ನಗದು,  25.3 ಕೆ.ಜಿ ಚಿನ್ನಾಭರಣ ಸೇರಿ 109 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.

ಜಾರಿ ನಿರ್ದೇಶನಾಲಯಕ್ಕೂ ಐಟಿ ಇಲಾಖೆ ಮಾಹಿತಿ ರವಾನೆ ಮಾಡಿದ್ದು ಪ್ರಕರಣ ವರ್ಗಾವಣೆ ಆದರೆ ಸ್ಯಾಂಡಲ್‌ವುಡ್‌ ದಿಗ್ಗಜರಿಗೆ ಸಂಕಷ್ಟ ಎದುರಾಗಬಹುದು.

ಮೂರು ತಿಂಗಳ ಕಾಲ ಗೌಪ್ಯ ತನಿಖೆ ನಡೆಸಿ ಈ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಅವ್ಯವಹಾರದ ಕುರಿತು ಶೀಘ್ರದಲ್ಲೇ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಐಟಿ ಹೇಳಿದೆ.

ಚಿತ್ರಮಂದಿರದಲ್ಲಿ ದಾಖಲೆ ರಹಿತವಾಗಿ ಸಂಗ್ರಹಿಸಿದ ನಗದು,ಆಡಿಯೋ ಹಕ್ಕು, ಡಿಜಿಟಲ್‌ ಹಕ್ಕುಗಳ ಮೂಲದ ಅವ್ಯವಹಾರ ನಡೆಸಿದ ಹಣ  ಇದಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ಆದರೆ ದಾಳಿಯಲ್ಲಿ ವೈಯಕ್ತಿಕವಾಗಿ ಯಾರ ಬಳಿ ಎಷ್ಟು ಸಂಪತ್ತು ಪತ್ತೆಯಾಗಿದೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸದೆ ಜಾಣತನವನ್ನು ತೋರಿದ್ದಾರೆ.

ಪ್ರಖ್ಯಾತ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌,ಸಿ.ಆರ್‌.ಮನೋಹರ್‌, ವಿಜಯ್‌ ಕಿರಗಂದೂರು ಮತ್ತು  ಜಯಣ್ಣ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ್ದರು.

ನಾಳೆ ವಿಚಾರಣೆಗೆ ಹಾಜರಾಗಿ
ನಾಲ್ವರು ನಿರ್ಮಾಪಕರು ಮತ್ತು ನಾಲ್ವರು ನಟರಿಗೆ ಸೋಮವಾರ ಐಟಿ ವಿಚಾರಣೆಗೆ ಹಾಜರಾಗುವಂತೆ ಐಟಿ ನೊಟೀಸ್‌ ನೀಡಲಾಗಿದೆ.

No Comments

Leave A Comment