Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಕೈ ಕಾಲು ಕತ್ತರಿಸ್ತೇನೆ ; ಅಧಿಕಾರಿಗೆ ಕೈ ಶಾಸಕನ ಧಮ್ಕಿ!

ಭದ್ರಾವತಿ: ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಭದ್ರಾವತಿ ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಅವರು ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಧಮ್ಕಿ ಹಾಕಿದ ವಿಡಿಯೋ ಬಹಿರಂಗವಾಗಿದೆ.

ಕೊಡ್ಲಿಕೆರೆ ಸಮೀಪ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಅರಣ್ಯ ಅಧಿಕಾರಿಯೊಬ್ಬರಿಗೆ ಪೋನ್‌ ಮೂಲಕ ಈ ಬೆದರಿಕೆ ಹಾಕಲಾಗಿದೆ.

ನೊಟೀಸ್‌ ಯಕೆ ಕೊಟ್ಟೆ,ಇವತ್ತು ಪೂಜೆ ಮಾಡಿದ್ದಾರೆ, ಇನ್ಮೇಲೆ ಯಾರೂ ಅಡ್ಡ ಬರಬಾರದು, ಬಂದ್ರೆ ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಫೋನ್‌ನಲ್ಲಿ ಆವಾಜ್‌ ಹಾಕಿದ್ದಾರೆ.

ಅರಣ್ಯ ಪ್ರದೇಶ ಅತಿಕ್ರಮಿಸದೆ ಇರುವಂತೆ ಅಧಿಕಾರಿ ನೊಟೀಸ್‌ ನೀಡಿದ್ದರು. ಈ ಬಗ್ಗೆ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಆ ಹಿನ್ನಲೆಯಲ್ಲಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

No Comments

Leave A Comment