Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಕೊಪ್ಪಳ: ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಕೊಪ್ಪಳ: ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲ್ಲೂಕಿನ ಮೆಟಗಲ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಶೇಖರಯ್ಯ ಬಿದನಲ್, ಅವರ ಪತ್ನಿ ಮತ್ತು ನಾಲ್ವರು ಪುತ್ರಿಯರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹಗಳು ಸಿಕ್ಕಿವೆ ಎಂದು ಕೊಪ್ಪಳದ ಪೊಲೀಸ್ ಸೂಪರಿಂಟೆಂಡೆಂಟ್ ರೇಣುಕ ಕೆ ಸುಕುಮಾರ ತಿಳಿಸಿದ್ದಾರೆ.

ಮೃತರನ್ನು 42 ವರ್ಷದ ಶೇಖರಯ್ಯ, ಅವರ ಪತ್ನಿ 37 ವರ್ಷದ ಜಯಮ್ಮ, ಮಕ್ಕಳಾದ ಬಾಸಮ್ಮ, ಗೌರಮ್ಮ, ಸಾವಿತ್ರಿ, ಪಾರ್ವತಿ ಎಂದು ಗುರುತಿಸಲಾಗಿದೆ.ಪತ್ನಿ ಮತ್ತು ಪುತ್ರಿಯರಿಗೆ ವಿಷವುಣ್ಣಿಸಿ ಶೇಖರಯ್ಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ತಕ್ಷಣಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಬೆಳೆಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೆ ಕುಟುಂಬದವರು ಈ ಕಠಿಣ ಕ್ರಮ ಕೈಗೊಂಡಿರಬಹುದು ಎಂದು ನೆರೆಹೊರೆಯವರು ಹೇಳುತ್ತಾರೆ.ಕೊಪ್ಪಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment