Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಶಬರಿಮಲೆ ವಿವಾದ: ದೇವಾಲಯದ ಸಂಪ್ರದಾಯಕ್ಕೆ ಬೆಲೆ ಕೊಡಿ, ಹಿಂದೂ ಧರ್ಮ ರಕ್ಷಿಸಿ- ನಟಿ ಶ್ರೀರೆಡ್ಡಿ

ಶಬರಿಮಲೆಗೆ ಇಬ್ಬರು  ಮಹಿಳೆಯರು ಪ್ರವೇಶಿಸಿದ್ದು, ದೇಶಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿದೆ.  ಈ ಬಗ್ಗೆ ಟಾಲಿವುಡ್ ನಟಿ ಶ್ರೀ ರೆಡ್ಡಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದದ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರೆಡ್ಡಿ, ಮಹಿಳೆಯರು ದೇವಾಲಯ ಪ್ರವೇಶಿಸುತ್ತಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. “ನಾನು ಹೆಣ್ಣುಮಕ್ಕಳನ್ನು ಗೌರವಿಸುತ್ತೇನೆ, ಏಕೆಂದರೆ ಅವರು ಕೆಲವು ಮೌಲ್ಯಗಳನ್ನು ಹೊಂದಿರುತ್ತಾರೆ.   ಆದ್ದರಿಂದ ದೇವಾಲಯದ ಸಂಪ್ರದಾಯಗಳಿಗೂ ಬೆಲೆ ನೀಡಿ, ಹಿಂದೂ ಧರ್ಮವನ್ನು ರಕ್ಷಿಸಿ, ಅಯ್ಯಪ್ಪ ದೇವರು, ಧಾರ್ಮಿಕ ಮೌಲ್ಯಗಳನ್ನು ಗೌರವಿಸಬೇಕೆಂಬುದು ನನ್ನ ನಂಬಿಕೆ, ದೇವರಿಗೆ ಅಪಚಾರವೆಸಗಿದರೆ ಅದು ಹೆಣ್ಣುಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ನಟಿ ಬರೆದುಕೊಂಡಿದ್ದಾರೆ.

No Comments

Leave A Comment