Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಖ್ಯಾತ ಸಾಹಿತಿ,ಪತ್ರಕರ್ತ ಈಶ್ವರಯ್ಯ ನಿಧನ

ಉಡುಪಿ; ಹಿರಿಯ ಸಾಹಿತಿ,ಪತ್ರಕರ್ತರಾದ ಈಶ್ವರಯ್ಯ (78)ರವರು ಭಾನುವಾರದ೦ದು ಬೆಳಿಗ್ಗೆ ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ. ಮಣಿಪಾಲದ ಖ್ಯಾತ ಪತ್ರಿಕೆಯಲ್ಲಿ ಸಪ್ತಾಹಿಕ ಸ೦ಪಾದದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಜನಾನುರಾಗಿಯಾಗಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು, ಅಲ್ಲದೇ ಛಾಯಾಚಿತ್ರದ ಬಗ್ಗೆ ಹೆಚ್ಚಿನ ಜ್ಞಾನ ವುಳ್ಳವರಾಗಿದ್ದರು.ಉಡುಪಿಯ ನಾಗರಿಕರು, ಹಾಗೂ ಕರಾವಳಿ ಕಿರಣ ಡಾಟ್ ಇವರ ನಿಧನಕ್ಕೆ ತೀವ್ರ ಸ೦ತಾಪವನ್ನು ಸೂಚಿಸಿದೆ.

ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿಯನ್ನು ಉಡುಪಿ ಪಡೆದಿದ್ದ ಅವರು, ಹಲವು ಪ್ರತಿಭೆಗಳ ಗಣಿ. ಅವರ ಜ್ಞಾನ ಹಲವು ಮುಖಗಳದ್ದು. ಅವರೊಬ್ಬರು ತುಂಬಿದ ಕೊಡ. ಅನುಭವೀ ಪತ್ರಕರ್ತರು. ಕಲಾಪ್ರೇಮಿ ಹಾಗೂ ಕಲಾವಿಹಾರಿಗಳು.ಸಂಗೀತ ಮತ್ತು ಛಾಯಾಚಿತ್ರಗ್ರಹಣಗಳೆರಡರಲ್ಲೂ ಸಿದ್ಧಹಸ್ತರು. ಒಳ್ಳೆಯ ಬರಹಗಾರರಾದ ಅವರು ಗಂಭೀರವಾಗಿಯೂ ಸರಸ ಶೈಲಿಯಲ್ಲಿಯೂ ಬರೆಯಬಲ್ಲವರು. ಉತ್ತಮ ವಾಗ್ಮಿಯಾಗಿರುವ ಅವರು ತಮ್ಮ ಮಾತಿನ ಮೋಡಿಯಿಂದ ಸಭಿಕರನ್ನು ಗಂಟೆಗಟ್ಟಲೆ ಸೆರೆಹಿಡಿಯಬಲ್ಲವರು. ಒಳ್ಳೆಯ ಓದುಗರಾಗಿರುವ ಅವರು ಸಮರ್ಥ ವಿಮರ್ಶಕರೂ ಆಗಿದ್ದರು.

ಪೊಲ್ಯ ಯಕ್ಷಗಾನ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2000), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (2001), ರಂಗವಾಚಸ್ಪತಿ ಬಿರುದು (2003), ಪರಶುರಾಮ ಪ್ರಶಸ್ತಿ (2003), ವ್ಯಾಸ ಸಾಹಿತ್ಯ ಪ್ರಶಸ್ತಿ (2008), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಈಶ್ವರಯ್ಯನವರಿಗೆ ಪ್ರಾಪ್ತವಾಗಿವೆ.

No Comments

Leave A Comment