Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ವಿಶ್ವದಾದ್ಯಂತ 2018ರಲ್ಲಿ ನಡೆದ ಮಾರಣಾಂತಿಕ ಉಗ್ರ ದಾಳಿಗಳು

2018 ನೇ ವರ್ಷ ಹಲವರ ಪಾಲಿಗೆ ಸಿಹಿ ತಂದುಕೊಟ್ಟರೇ ಕೆಲವರಿಗೆ ಕಹಿ ಉಣಿಸಿದೆ, 2018ರಲ್ಲಿ ವಿಶ್ವಾದ್ಯಂತ ನಡೆದ ಪ್ರಮುಖ ಭಯೋತ್ಪಾದಕ ದಾಳಿಯ ಕುರಿತ ಲಘು ವಿವರಣೆ ಇಲ್ಲಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಜಗತ್ತಿನಲ್ಲಿ ಅತಿ ಹೆಚ್ಚು ಉಗ್ರರದಾಳಿ ನಡೆದಿವೆ, ಅದರಲ್ಲಿ 8,439 ಮಂದಿ ಸಾವನ್ನಪ್ಪಿದ್ದಾರೆ, ಆದರೆ 2017 ರಲ್ಲಿ 7,717 ಮಂದಿ ಮೃತರಾಗಿದ್ದರು. ಜನವರಿ 1 2018 ರಿಂದ ಡಿಸೆಂಬರ್ 24 2018 ರವರೆಗೆ ಪ್ರಪಂಚದಾದ್ಯಂತ 1,461 ಉಗ್ರರ ದಾಳಿಗಳು ನಡೆದಿವೆ, ಇಸ್ಲಾಮಿಕ್ ಸಂಘಟನೆಯೊಂದೇ ಸುಮಾರು 411 ದಾಳಿ ನಡೆಸಿದ್ದು, 2,809 ಮಂದಿ ಸಾವನ್ನಪ್ಪಿದ್ದಾರೆ.

 

 

ಧಾರ್ಮಿಕ ಅಲ್ಪ ಸಂಖ್ಯಾತ ರಾಷ್ಟ್ರಗಳಾದ ಆಪ್ಘಾನಿಸ್ತಾನ, ಇರಾಕ್, ನೈಜಿರಿಯಾ, ಸೊಮಾಲಿಯಾ ಮತ್ತು ಸಿರಿಯಾಗಳಲ್ಲಿ ಅತಿ ಹೆಚ್ಚಿನ ದಾಳಿ ನಡೆದಿವೆ, 2017 ರಲ್ಲಿ ಸಿರಿಯಾದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು, 2018 ರಲ್ಲೂ ಅದೇ ಪರಿಸ್ಥಿತಿ ಯಾವುದೇ ಬದಲಾವಣೆಯಿಲ್ಲದೇ ಮುಂದುವರಿದಿದೆ.
ಜನವರಿ 20 ಕಾಬೂಲ್ ಇಂಟರ್ ನ್ಯಾಷನಲ್ ಕಾಂಟಿನೆಂಟ್ ಹೊಟೇಲ್ ಮೇಲೆ ದಾಳಿ: 18 ಸಾವು
ಜನವರಿ 20 ಕಾಬೂಲ್ ಇಂಟರ್ ನ್ಯಾಷನಲ್ ಕಾಂಟಿನೆಂಟ್ ಹೊಟೇಲ್ ಮೇಲೆ ದಾಳಿ ನಡೆದಿದ್ದು 18 ಮಂದಿ ಸಾವನ್ನಪ್ಪಿದ್ದರು, ಅದರಲ್ಲಿ 14 ಮಂದಿ ವಿದೇಶಿ ಪ್ರಜೆಗಳಾಗಿದ್ದರು.
ಜನವರಿ 27 ಕಾಬೂಲ್ ನಲ್ಲಿ ಆ್ಯಂಬುಲೆನ್ಸ್ ಸ್ಪೋಟ; 102 ಮಂದಿ ಸಾವು
ಕಾಬೂಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ನಡೆದ ದಾಳಿ ಒಂದು ವಾರ ಕಳೆಯುವುದರೊಳಗೆ ನಡೆದ ಆ್ಯಂಬುಲೆನ್ಸ್ ಸ್ಫೋಟದಲ್ಲಿ 103 ಮಂದಿ ಸಾವನ್ನಪ್ಪಿ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಮಾರ್ಚ್ 24: ಪ್ರೆಂಚ್ ಸೂಪರ್ ಮಾರ್ಕೆಟ್ ಮೇಲೆ ದಾಳಿ; ನಾಲ್ವರ ಸಾವು
25 ವರ್ಷದ ಪ್ರೆಂಚ್ ಪ್ರಜೆಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು,
ಮೇ 2: ನೈಜಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ;86 ಸಾವು
ನೈಜಿರಿಯಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ  ಸುಮಾರು 86 ಮಂದಿ ಮರಣ ಹೊಂದಿದ್ದರು, ಈ ದಾಳಿಯನ್ನು ಎಪಿಎಫ್ ಉಗ್ರ ಸಂಘಟನೆ ಹೊತ್ತಿತ್ತು.
ಮೇ 6 ಆಪ್ಘಾನಿಸ್ತಾನದಲ್ಲಿ ಮತಕೇಂದ್ರದ ಮೇಲೆ ದಾಳಿ: 17 ಮಂದಿ ಕಗ್ಗೊಲೆ
ಮೇ 6ರಂದು ಮತ ಕೇಂದ್ರದ ಮೇಲೆ ನಡೆದ ಸರಣಿ ಬಾಂಬ್ ದಾಳಿಯಲ್ಲಿ ಸುಮಾರು 17 ಮಂದಿ ಸಾವನ್ನಪ್ಪಿದ್ದರು. ಮತ ಕೇಂದ್ರದ ಬಳಿ ಮಸೀದಿಯಿದ್ದ ಪರಿಣಾಮ ಸುಮಾರು 32 ಮಂದಿ ಗಾಯಗೊಂಡಿದ್ದರು.
ಮೇ22: ಕಂದಹಾರ್ ನಲ್ಲಿ ಮಿನಿವ್ಯಾನ್ ಸ್ಪೋಟ; 16 ಮಂದಿ ಸಾವು
ಕಂದಹಾರ್ ನಲ್ಲಿ ಸ್ಪೋಟಕ ತುಂಬಿದ್ದ ಮಿನಿ ವ್ಯಾನ್ ಸ್ಪೋಟಗೊಂಡ ಪರಿಣಾಮ 16 ಮಂದಿ ಸಾವನ್ನಪ್ಪಿ 38 ಜನ ಗಾಯಗೊಂಡಿದ್ದರು.
ಜೂನ್ 18 ನೈಜಿರಿಯಾದಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟ: 31 ಮಂದಿ ದುರ್ಮರಣ
ಇಸ್ಲಾಮಿಕ್ ಉಗ್ರರು ದಾಂಬೋಹಾ ಬೋಕೋ ಹರಾಮ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 31 ಮಂದಿ ಸಾವನ್ನಪ್ಪಿದ್ದರು. ಈ ಆತ್ಮಾಹುತಿ ದಾಳಿಗೆ ಯುವತಿಯರನ್ನು ಬಳಸಿಕೊಳ್ಳಲಾಗಿತ್ತು.
ಜುಲೈ13 ಪಾಕಿಸ್ತಾನದ ಚುನಾವಣಾ ರ್ಯಾಲಿ ಮೇಲೆ ದಾಳಿ: 145 ಮಂದಿ ಸಾವು
ಪಾಕಿಸ್ತಾನ ಚುನಾವಣೆ ವೇಳೆ ರ್ಯಾಲಿಯ ಮೇಲೆ ನಡೆದ ದಾಳಿಯಲ್ಲಿ ಪ್ರಮುಖ ರಾಷ್ಟ್ರ ನಾಯಕರು ಸೇರಿದಂತೆ ಒಟ್ಟು 145 ಮಂದಿ ಅಸುನೀಗಿದ್ದರು. ಜೊತೆಗೆ 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಸೆಪ್ಟಂಬರ್ 22 ಇರಾನ್ ಮಿಲಿಟರ್ ಪರೇಡ್ ಮೇಲೆ ದಾಳಿ: 25 ಮಂದಿ ಕಗ್ಗೊಲೆ
ಸರ್ಕಾರ ವಿರೋದಿ ಅರಬ್ ಗುಂಪು ಮತ್ತು ಇಸ್ಲಾಮಿಕ್ ಸಂಘಟನೆ ಜೊತೆಯಾಗಿ ನಡೆಸಿದ ಉಗ್ರರ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ಮಹಿಳೆಯರು ಮಕ್ಕಳು ಸೇರಿದ್ದರು.
ಅಕ್ಟೋಬರ್ 17: ರಷ್ಯಾದ ಕ್ರಿಮಿಯಾ ಕಾಲೇಜು ಮೇಲೆ ಬಾಂಬ್ ದಾಳಿ;18 ಸಾವು
18 ವರ್ಷದ ಯುವಕನೊಬ್ಬ ಏಕಾಏಕಿ ನಡೆಸಿದ ಗುಂಡಿನ ದಾಳಿಯಲ್ಲಿ  ಕ್ರಿಮಿಯಾ ಕಾಲೇಜಿನ ವಿದ್ಯಾರ್ಥಿಗಳು ಸೇರ್ 18 ಮಂದಿ ಅಸು ನೀಗಿದ್ದರು, ಸತ್ತವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳೇ ಆಗಿದ್ದರು.
ನವೆಂಬರ್ 23; ಕರಾಚಿ -ಚೈನಾ ರಾಯಭಾರ ಕಚೇರಿ ಮೇಲೆ ದಾಳಿ ;ನಾಲ್ವರ ಸಾವು
ನವೆಂಬರ್ 23 ಖೈಬರ್ ಸೆಮಿನಾರ್ ಅಟ್ಯಾಕ್: 32 ಮಂದಿ ದುರ್ಮರಣ
ಪಾಕಿಸ್ತಾನದ ಖೈಬರ್ ನಲ್ಲಿ ನಡೆದ ಮಾರಣಾಂತಿಕ ಬಾಂಬ್ ದಾಳಿಯಲ್ಲಿ 32 ಮಂದಿ ಸಾವನ್ನಪ್ಪಿ 40 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.ಅದರಲ್ಲಿ ಮೂವರು ಪಾಕಿಸ್ತಾನಿ ಸಿಖ್ಕರು ಸೇರಿದ್ದರು,
ಡಿಸೆಂಬರ್ 22: ಸೋಮಾಲಿಯದಲ್ಲಿ ಬಾಂಬ್ ದಾಳಿ; 16 ಸಾವು
ಆಲ್ ಖೈದಾ ಉಗ್ರ ಸಂಘಟನೆ ಉಗ್ರರು 2 ಕಡೆ ನಡೆಸಿದ ದಾಳಿಯಿಂದಾಗಿ ಸೊಮಾಲಿಯಾದ ಸೇನಾ ಮುಖ್ಯಸ್ಥರು ಹಾಗೂ ಮೇಯರ್ ಸೇರಿ 16 ಮಂದಿ ಸಾವನ್ನಪ್ಪಿದ್ದರು.
No Comments

Leave A Comment