Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಐಐಟಿ ಹೈದರಾಬಾದ್‌ : 213 ವಿದ್ಯಾರ್ಥಿಗಳಿಗೆ 80 ಕಂಪೆನಿಗಳಿಂದ ಆಫ‌ರ್‌

ಹೈದರಾಬಾದ್‌ : ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ತನ್ನ 213 ವಿದ್ಯಾರ್ಥಿಗಳಿಗೆ 2018-19ರ ಮೊದಲ ಹಂತದ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ ನಲ್ಲಿ  80 ಕಂಪೆನಿಗಳಿಂದ ಉದ್ಯೋಗಗಳ ಆಫ‌ರ್‌ ಬಂದಿದೆ ಎಂದು ತಿಳಿಸಿದೆ.

2017-18ರಲ್ಲಿ ತಮ್ಮ  191 ವಿದ್ಯಾರ್ಥಿಗಳಿಗೆ  68 ಕಂಪೆನಿಗಳಿಂದ ಆಫ‌ರ್‌ ಬಂದಿತ್ತು. ಈ ವರ್ಷ ಡಿ.1ರಿಂದ 22ರ ವರೆಗಿನ ಅವದಿಯಲ್ಲಿ ಮೊದಲ ಹಂತದ ಪ್ಲೇಸ್‌ಮೆಂಟ್‌ ಗೆ ಒಟ್ಟು 418 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು ಎಂದು ವಿದ್ಯಾಲಯ ಹೇಳಿದೆ.

17 ವಿದ್ಯಾರ್ಥಿಗಳು ಅಮಝಾನ್‌, ಮೈಕ್ರೋಸಾಫ್ಟ್, ಕ್ವಾಲ್‌ಕಾಮ್‌, ಸ್ವಿಗ್ಗಿ, ಎಲೆಕ್ಟ್ರಾನಿಕ್‌ ಆರ್ಟ್‌ ಮತ್ತು ಡಿ’ಶಾ ಕಂಪೆನಗಳ ಆಫ‌ರ್‌ ಸ್ವೀಕರಿಸಿದ್ದಾರೆ. ಇಬ್ಬರಿಗೆ ISRO ದಿಂದ ನೇಮಕಾತಿ ಸಿಕ್ಕಿದೆ ಎಂದು ವಿದ್ಯಾಲಯ ತಿಳಿಸಿದೆ.

No Comments

Leave A Comment