Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ದಟ್ಟ ಮಂಜು ಕವಿದ ವಾತಾವರಣ; ಸರಣಿ ಅಪಘಾತಕ್ಕೆ ಎಂಟು ಮಂದಿ ಬಲಿ!

ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮಿತಿಮೀರಿದ್ದು, ಏತನ್ಮಧ್ಯೆ ದಟ್ಟವಾದ ಮಂಜು ಕವಿದ ವಾತಾವರಣದಿಂದಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿರುವ ಘಟನೆ ಹರ್ಯಾಣದ ರೋಹ್ಟಕ್ ಹೆದ್ದಾರಿಯಲ್ಲಿ ನಡೆದಿದೆ.

ಮುಂಜಾನೆ ವೇಳೆಯ ಮಂಜು ಕವಿದಿದ್ದರಿಂದ ಶಾಲಾ ಬಸ್, ಕಾರುಗಳು ಮತ್ತು ಲಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ವಾಹನಗಳು ಒಂದಕ್ಕೊಂದು ಸರಣಿಯಾಗಿ ಡಿಕ್ಕಿ ಹೊಡೆದು ಜಖಂಗೊಂಡಿದ್ದವು. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹತ್ತು ಜನರು ಗಾಯಗೊಂಡಿದ್ದಾರೆ.

ಡಿಕ್ಕಿ ಹೊಡೆದು ನಿಂತಿದ್ದ ವಾಹನಗಳನ್ನು ಜನರು ಹರಸಾಹಸಪಟ್ಟು ತೆರೆವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಸರಣಿ ಅಪಘಾತದಿಂದಾಗಿ ಎರಡು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿ ವಿವರಿಸಿದೆ.

ತಮ್ಮ ಹಳ್ಳಿಯಿಂದ ನಜಾಫ್ ಗಢ್ ನತ್ತ ತೆರಳುತ್ತಿದ್ದ ಎಸ್ ಯುವಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಏಳು ಮಂದಿ ಮಹಿಳೆಯರು, ಓರ್ವ ಪುರುಷ ಸೇರಿದ್ದಾನೆ ಎಂದು ವರದಿ ಹೇಳಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹರ್ಯಾಣ ಸಚಿವ ಓಪಿ ಧಾನ್ಕರ್ ಎಎನ್ ಐ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

No Comments

Leave A Comment