Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ರಾಷ್ಟ್ರಪತಿಯವರ ಉಡುಪಿಯ ರಥಬೀದಿಯ ಕಾರ್ಯಕ್ರಮ ರದ್ದು-ನಿಟ್ಟುಸಿರು ಬಿಟ್ಟ ಜನರು

ಉಡುಪಿ: ಉಡುಪಿಯ ಹಿರಿಯ ಮಠಾಧೀಶರಾದ ಶ್ರೀಪೇಜಾವರ ತೀರ್ಥಸ್ವಾಮೀಜಿಯವರು ಪಟ್ಟ ಸ್ವೀಕರಿಸಿ ಎ೦ಬತ್ತನೇ ವರುಷದ ಕಾರ್ಯಕ್ರಮವು ಡಿ 27ರ೦ದು ಉಡುಪಿಗೆ ರಾಷ್ಟ್ರಪತಿಯವರು ಬರುವ ಕಾರ್ಯಕ್ರಮವೊ೦ದನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ರಥಬೀದಿಯಲ್ಲಿ ಚಪ್ಪರ ಮಹೂರ್ತವನ್ನು ಸಹ ಶುಕ್ರವಾರದ೦ದು ತರಾತುರಿಯಲ್ಲಿ ನೆರವೇರಿಸಲಾಯಿತು. ಈ ಬಗ್ಗೆ ಜನರಲ್ಲಿಯೂ ಸಹ ತಳಮಳವು ಸಹ ಉ೦ಟಾಗಿತ್ತು.

ಇದೀಗ ದಿಢೀರನೇ ಚಪ್ಪರ ಮಹೂರ್ತವನ್ನು ಮಾಡಲಾದ ಸ್ಥಳದಲ್ಲಿ ಹಾಕಲಾದ ಎಲ್ಲಾ ಸಲಕರಣೆಗಳನ್ನು ವಾಪಾಸುತೆಗೆದುಕೊ೦ಡ ಘಟನೆಯು ಶನಿವಾರದ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ತೆಗೆದುಕೊ೦ಡ ಹೋದ ದೃಶ್ಯವನ್ನು ಕ೦ಡು ಪರಿಸರದ ಜನರು ಸ೦ತಸವಾನ್ನು೦ಟು ಮಾಡಿತು.

ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರು ಬರುವ ಬಗ್ಗೆ ಇನ್ನೂ ನಿಗ೦ಟಾಗಿಲ್ಲ ಅದರ ಮೊದಲೇ ಮಠದ ಕಡೆಯಿ೦ದ ತರಾತುರಿಯ ತಯಾರಿ ನಡೆಸಿರುವುದು ನಗೆಪಾಟಲಿಗೆ ಕಾರಣವಾಗಿದೆ.

No Comments

Leave A Comment