Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಹಾಕಿ ವಿಶ್ವಕಪ್: ಅತೀ ರೋಚಕ ಪಂದ್ಯದಲ್ಲಿ ಗೆದ್ದ ಬೆಲ್ಜಿಯಂ ಚೊಚ್ಚಲ ಚಾಂಪಿಯನ್!

ಭುವನೇಶ್ವರ್: ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಬೆಲ್ಜಿಯಂ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು 0-0ಯಿಂದ ಸಮಬಲ ಸಾಧಿಸಿದ್ದವು. ಇದರಿಂದಾಗಿ ಶೂಟೌಟ್ ನೀಡಲಾಗಿತ್ತು. ಇದರಲ್ಲೂ ತಂಡಗಳು 2-2ರಿಂದ ಸಮಬಲ ಸಾಧಿಸಿದ್ದರಿಂದ ಕೊನೆಗೆ ಸಡನ್ ಡೆತ್ ಶೂಟೌಟ್ ಅನ್ನು ನೀಡಲಾಯಿತು. ಇದರಲ್ಲಿ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಚೊಚ್ಚಲ ಚಾಂಪಿಯನ್ ಪಟ್ಟಕ್ಕೆ ಮುತ್ತಿಟ್ಟಿತು. 

ಒಡಿಶಾದ ಕಳಿಂಗ ಹಾಕಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಹಣಾಹಣಿ ನಡೆದಿತ್ತು.

No Comments

Leave A Comment