Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಬೆಸ್ಟ್‌ ಮ್ಯಾಚ್‌ : ಸೈನಾ ನೆಹವಾಲ್‌ – ಪುರುಪಳ್ಳಿ ಕಶ್ಯಪ್‌ ವಿವಾಹ

ಹೊಸದಿಲ್ಲಿ : ಬೆಸ್ಟ್‌ ಮ್ಯಾಚ್‌ ಆಫ್ ಮೈ ಲೈಫ್ – ಈ ಸುಂದರವಾದ ಪದಗಳೊಂದಿಗೆ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹವಾಲ್‌ ಅವರು ಭಾರತ ತಂಡದ ಸಹ ಸದಸ್ಯ ಪುರುಪಳ್ಳಿ ಕಶ್ಯಪ್‌ ಅವರೊಂದಿಗಿನ ತನ್ನ ವಿವಾಹವನ್ನು ಇಂದು ಶುಕ್ರವಾರ ಸಂಜೆ ಪ್ರಕಟಿಸಿದ್ದಾರೆ.

ವಿಶ್ವದ ನಂಬರ್‌ 10 ಬ್ಯಾಡ್ಮಿಂಟರ್‌ ತಾರೆ ಎನಿಸಿಕೊಂಡಿರುವ ಸೈನಾ ಅವರು ಗುಲಾಬಿ ಬಣ್ಣದ ಲೆಹೆಂಗಾ ಮತ್ತು ತಳದಲ್ಲಿ ಲ್ಯಾವೆಂಡರ್‌ ಪ್ರಿಂಟ್‌ ಇರುವ ದಿರಿಸಿನಲ್ಲಿ ಕಶ್ಯಪ್‌ ಅವರೊಂದಿಗೆ ಕಾಣಿಸಿಕೊಂಡ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.

ಕಶ್ಯಪ್‌ ಅವರು ಆಕರ್ಷಕ ಕುರ್ತಾ ಮತ್ತು ನೆಹರೂ ಜ್ಯಾಕೆಟ್‌ನಲ್ಲಿ, ಸೈನಾ ಜತೆಗೆ ಸುಂದರ ಜೋಡಿಯಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಸೈನಾ-ಕಶ್ಯಪ್‌ ನಗುಮೊಗದೊಂದಿಗೆ ಹೂಮಾಲೆ ವಿನಿಮಯಿಸಿಕೊಳ್ಳುವ ಸರಳ ಸಮಾರಂಭದಲ್ಲಿ ಅವರ ಕುಟುಂಬದವರು ಮತ್ತು ಮಿತ್ರರು ಪಾಲ್ಗೊಂಡಿದ್ದರು.

ವರದಿಗಳ ಪ್ರಕಾರ ಸೈನಾ ಮತ್ತು ಕಶ್ಯಪ್‌ ಕಳೆದೊಂದು ದಶಕದಿಂದ ಪರಸ್ಪರ ನಿಕಟರಾಗಿದ್ದರು. ಹಾಗಿದ್ದರೂ ತಮ್ಮ ಸುಮಧುರ ಗೆಳೆತನವನ್ನು ಬಹಿರಂಗಪಡಿಸದೆ ತಮ್ಮ ವೃತ್ತಿಪರ ಗುರಿ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ವರದಿಗಳ ಪ್ರಕಾರ ಇವರ ವೈವಾಹಿಕ ಸತ್ಕಾರ ಕೂಟವು ಇದೇ ಡಿ.21ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

No Comments

Leave A Comment