Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಟರ್ಕಿಯಲ್ಲಿ ಭೀಕರ ರೈಲು ದುರಂತ; 9 ಸಾವು, ಹಲವರು ಗಂಭೀರ

ಅಂಕಾರ: ಟರ್ಕಿಯ ರಾಜಧಾನಿ ಅಂಕಾರದಲ್ಲಿ ಗುರುವಾರ ಹೈ ಸ್ಪೀಡ್‌ ರೈಲೊಂದು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಮತ್ತೂಂದು ರೈಲಿಗೆ ಡಿಕ್ಕಿ ಪರಿಣಾಮ 9 ಜನ ಮೃತಪಟ್ಟು 50 ಮಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಮೂವರು ರೈಲ್ವೆ ಸಿಬ್ಬಂದಿ ಸೇರಿದ್ದಾರೆ ಎಂದು ಅಲ್ಲಿಯ ಅಧಿಕಾರಿ ಹೇಳಿದ್ದಾರೆ. ರೈಲು ಅಂಕಾರದ ನಿಲ್ದಾಣದಿಂದ ಹೊರಟ 6 ನಿಮಿಷಗಳಲ್ಲಿ ದುರಂತ ಸಂಭವಿಸಿದೆ.

ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಅಪಘಾತದ ತೀವ್ರತೆ ಎಷ್ಟಿಂತೆಂದರೆ ರೈಲು ಢಿಕ್ಕಿಯಾದ ಬಳಿಕ ಪಕ್ಷದ ಕಟ್ಟಡಕ್ಕೆ ಅಪ್ಪಳಿಸಿದ್ದು ಕಟ್ಟಡವೂ ಜಖಂಗೊಂಡಿದೆ. ರೈಲಿನ ಬೋಗಿಗಳು ಒಂದರ ಒಳಗೆ ಇನ್ನೊಂದು ತೂರಿಕೊಳ್ಳುವಷ್ಟು ಭೀಕರವಾಗಿತ್ತು.

No Comments

Leave A Comment