Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ವಿಜಯ್ ಮಲ್ಯ ಗಡಿಪಾರು ಪ್ರಕರಣ: ಮದ್ಯದ ದೊರೆಗಾಗಿ ಕಾದಿದೆ ಮುಂಬೈ ನ ಕಾರಾಗೃಹ!

ಬ್ರಿಟನ್: ವಿಜಯ್ ಮಲ್ಯ ಗಡಿ ಪಾರು ಪ್ರಕರಣ ಯುಕೆಯ ಕೋರ್ಟ್ ನಲ್ಲಿ ಇತ್ಯರ್ಥವಾಗಲಿದ್ದು, ಇದಕ್ಕೂ ಮುನ್ನ ಮುಂಬೈ ನ  ಆರ್ಥರ್ ರೋಡ್ ಜೈಲು ಹೆಚ್ಚಿನ ಭದ್ರತೆಯೊಂದಿಗೆ ಮದ್ಯದ ದೊರೆಗಾಗಿ ಕಾದಿದೆ.
ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ 9,000 ಕೋಟಿ ರೂಪಾಯಿ ಸಾಲ ವಾಪಸ್ ನೀಡಬೇಕಿದ್ದು, ಮಲ್ಯ ಗಡಿ ಪಾರು ಪ್ರಕರಣದ ಬಗ್ಗೆ ಬ್ರಿಟನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಡಿ.10 ರಂದು ತೀರ್ಪು ಪ್ರಕಟಿಸಲಿದೆ. 

ಒಂದು ವೇಳೆ ಮಲ್ಯ ಗಡಿಪಾರಾದಾರೆ ಮುಂಬೈ ನ ಆರ್ಥರ್ ರೋಡ್ ಜೈಲಿನಲ್ಲಿರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಗಡಿಪಾರು ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ, ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಕೋರ್ಟ್ ತೀರ್ಪಿಗೂ ಸಾಲ ಮರುಪಾವತಿಗೂ ಸಂಬಂಧವಿಲ್ಲ ಎಂದು ಕೋರ್ಟ್ ಗೆ ಹಾಜರಾಗಿರುವ ಮಲ್ಯ ಹೇಳಿದ್ದಾರೆ.
No Comments

Leave A Comment