Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

39ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ : “ಸಮಷ್ಟಿ ಬೆಂಗಳೂರು ” ತಂಡದ ” ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ” ನಾಟಕಕ್ಕೆ ಪ್ರಥಮ ಬಹುಮಾನ

ಉಡುಪಿ:ರಂಗಭೂಮಿ (ರಿ.) ಉಡುಪಿಯ 39ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2018 ರ ಪ್ರಥಮ ಬಹುಮಾನವು. “ಸಮಷ್ಟಿ ಬೆಂಗಳೂರು ” ತಂಡದ ” ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ| ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂಂ.35,000/- ಮತ್ತು ಸ್ಮರಣಿಕೆ ಹಾಗೂ ಡಾ|ಟಿ.ಎಮ್.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.

ದ್ವಿತೀಯ ಬಹುಮಾನವಾದ ದಿ| ಕುತ್ಪಾಡಿ ಆನಂದ ಗಾಣಿಗ ಸ್ಮಾರಕ ರಂಗ ನಿರ್ದೇಶಕ ರವಿರಾಜ್ ಹೆಚ್.ಪಿ ಯವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕವು “ಸುಮನಸಾ ಕೊಡವೂರು – ಉಡುಪಿ ” ತಂಡದ ” ಅವ್ವ” ನಾಟಕಕ್ಕೆ ಲಭಿಸಿದೆ.

“ರಂಗಪಯಣ (ರಿ.) ಬೆಂಗಳೂರು ತಂಡದ ” ಗುಲಾಬಿ ಗ್ಯಾಂಗು” ನಾಟಕವು ತೃತೀಯ ಬಹುಮಾನವನ್ನು ಪಡೆದು ಕೊಂಡಿದ್ದು, ಪಿ.ವಾಸುದೇವ ರಾವ್ ಮತ್ತು ಡಾ| ಪಿ. ಗಣಪತಿ ರಾವ್ ರವರ ಕೊಡುಗೆಯಾದ ದಿ| ಪಡುಕುದ್ರು ಪದ್ಮಾವತಿ – ಶ್ರೀನಿವಾಸ ರಾವ್ ಸ್ಮಾರಕ ನಗದು ಬಹುಮಾನವಾದ ರೂ.15,000/- ಮತ್ತು ಸ್ಮರಣಿಕೆಗೆ ಪಾತ್ರವಾಗಿದೆ.

ಬಹುಮಾನಗಳ ವಿವರ :

ಶ್ರೇಷ್ಠ ನಿರ್ದೇಶನ :-
ಪ್ರಥಮ : ರಂಗ ನಿರ್ದೇಶಕ ದಿ|ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ರೂ.5,000 ನಗದು ಮತ್ತು ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ –
ಶ್ರೀ ಕೃಷ್ಣಮೂರ್ತಿ ಕವತ್ತಾರ್ – ನಾಟಕ- ” ಅವ್ವ”
ತಂಡ- ” ಸುಮನಸಾ ಕೊಡವೂರು – ಉಡುಪಿ”

ದ್ವಿತೀಯ : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಶ್ರೀ ಮೈಮ್ ರಮೇಶ್ ನಾಟಕ- “ಅಶ್ವತ್ಥಾಮ”
ತಂಡ- “ಜಿ.ಪಿ.ಐ.ಇ.ಆರ್. ರಂಗ ತಂಡ, ಮೈಸೂರು”

ತೃತೀಯ : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ಶ್ರೀ.ರಾಜಗುರು ಹೊಸಕೋಟೆ, ನಾಟಕ- “ಗುಲಾಬಿ ಗ್ಯಾಂಗ್”
ತಂಡ- ರಂಗಪಯಣ (ರಿ.) ಬೆಂಗಳೂರು

ಶ್ರೇಷ್ಠ ನಟ :
ಪ್ರಥಮ : ದಿ| ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಹರಿ ಸಮಷ್ಟಿ
ಸಮಷ್ಟಿ ಬೆಂಗಳೂರು ತಂಡದ
ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ ನಾಟಕದ ಕುಕ್ ಪಾತ್ರಧಾರಿ.

ದ್ವಿತೀಯ : ದಿ| ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ಆನಂದ್ ಪಿ.
ಸಮಷ್ಟಿ ಬೆಂಗಳೂರು ತಂಡದ
ಮೊಕ್ಕಾಂ ಪೋಸ್ಟ್ ಬೊಂಬಿಲ್‍ವಾಡಿ ನಾಟಕದ ಭೈರವ ಪಾತ್ರಧಾರಿ.

ತೃತೀಯ : ದಿ| ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
ಸಂದೀಪ ಬೇವಿನಹಳ್ಳಿ
ಸಮಷ್ಟಿ ಬೆಂಗಳೂರು ತಂಡದ
ಮೊಕ್ಕಾಂ ಪೋಸ್ಟ್ ಬೊಂಬಿಲ್‍ವಾಡಿ ನಾಟಕದ ಹಿಟ್ಲರ್ ಪಾತ್ರಧಾರಿ.

ಶ್ರೇಷ್ಠ ನಟಿ :

ಪ್ರಥಮ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 3,000 ಮತ್ತು ಸ್ಮರಣಿಕೆ –
ಶ್ವೇತಾ ಎಸ್.ಸಮಷ್ಟಿ ಬೆಂಗಳೂರು ತಂಡದ ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ ನಾಟಕದ ಕಾಕು/ರಾಣಿ ಪಾತ್ರಧಾರಿಣಿ.

ದ್ವಿತೀಯ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ಸ್ಮರಣಿಕೆ
ನಯನಾ ಸೂಡ
ರಂಗಪಯಣ (ರಿ.) ಬೆಂಗಳೂರು ತಂಡದ
ಗುಲಾಬಿ ಗ್ಯಾಂಗು ನಾಟಕದ ಕಮಲಾ ದೇವಿ ಪಾತ್ರಧಾರಿಣಿ.

ತೃತೀಯ : ಅಭಿನೇತ್ರಿ ಶ್ರೀಮತಿ ವಿನಯಾ ಪ್ರಸಾದ್ ಪ್ರಾಯೋಜಿತ ನಗದು ಬಹುಮಾನ ರೂ. 1,000 ಮತ್ತು ಸ್ಮರಣಿಕೆ
ಕುಮಾರಿ ವಿದ್ಯಾದಾಯಿನಿ
ಸುಮನಸ ಕೊಡವೂರು-ಉಡುಪಿ ತಂಡದ
ಅವ್ವ ನಾಟಕದ ಅವ್ವ ಪಾತ್ರಧಾರಿಣಿ.

ಶ್ರೇಷ್ಠ ಸಂಗೀತ :
ಪ್ರಥಮ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ
ನಾಟಕ- ಗುಲಾಬಿ ಗ್ಯಾಂಗು
ತಂಡ- ರಂಗಪಯಣ (ರಿ.) ಬೆಂಗಳೂರು.

ದ್ವಿತೀಯ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ ನಾಟಕ- ಅವ್ವ
ತಂಡ- ಸುಮನಸಾ ಕೊಡವೂರು-ಉಡುಪಿ

ತೃತೀಯ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ ನಾಟಕ- ಪಂಚವಟಿ
ತಂಡ- ಕನ್ನಡ ಸಂಘ, ನಾಗಮಂಗಲ

ಶ್ರೇಷ್ಠ ರಂಗಪರಿಕರ :
ಪ್ರಥಮ : ದಿ| ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 3,000 ಮತ್ತು ಸ್ಮರಣಿಕೆ –
ನಾಟಕ : ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ
ತಂಡ: ಸಮಷ್ಟಿ ಬೆಂಗಳೂರು

ದ್ವಿತೀಯ : ದಿ| ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 2,000 ಮತ್ತು ಸ್ಮರಣಿಕೆ
ನಾಟಕ : ಅವ್ವ
ತಂಡ : ಸುಮನಸಾ ಕೊಡವೂರು-ಉಡುಪಿ

ತೃತೀಯ : ದಿ| ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 1,000 ಮತ್ತು ಸ್ಮರಣಿಕೆ
ನಾಟಕ : ಪಂಚವಟಿ
ತಂಡ : ಕನ್ನಡ ಸಂಘ, ನಾಗಮಂಗಲ

ಶ್ರೇಷ್ಠ ಪ್ರಸಾಧನ :

ಪ್ರಥಮ : ದಿ| ಉಷಾ ಶಾಂತಾರಾಮ್, ದಿ|ಎಸ್.ಎಲ್. ನಾರಾಯಣ ಭಟ್ ಮತ್ತು ದಿ|ಟಿ.ಉಪೇಂದ್ರ ಪೈ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ
ನಾಟಕ: ಗುಲಾಬಿ ಗ್ಯಾಂಗು
ತಂಡ: ರಂಗಪಯಣ (ರಿ.) ಬೆಂಗಳೂರು

ದ್ವಿತೀಯ : ರಂಗನಟ ಯು.ಎಂ. ಅಸ್ಲಾಂ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ -.
ನಾಟಕ- ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ
ತಂಡ- ಸಮಷ್ಟಿ ಬೆಂಗಳೂರು

ತೃತೀಯ : ಸದಾನಂದ ಸುವರ್ಣ, ಮುಂಬಾಯಿ ಪ್ರಾಯೋಜಿತ ನಗದು ಬಹುಮಾನ ರೂ.1000 ಮತ್ತು ಸ್ಮರಣಿಕೆ -.
ನಾಟಕ : ದಶಾನನ ಸ್ವಪ್ನಸಿದ್ದಿ
ತಂಡ : ನಮ ತುಳುವೆರ್ ಕಲಾ ಸಂಘಟನೆ (ರಿ.) ಮುದ್ರಾಡಿ

ಶ್ರೇಷ್ಠ ರಂಗ ಬೆಳಕು :
ಪ್ರಥಮ : ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ
ನಾಟಕ: ಗುಲಾಬಿ ಗ್ಯಾಂಗು
ತಂಡ: ರಂಗಪಯಣ (ರಿ.) ಬೆಂಗಳೂರು

ದ್ವಿತೀಯ :
ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ
ನಾಟಕ : ಅವ್ವ
ತಂಡ : ಸುಮನಸಾ ಕೊಡವೂರು-ಉಡುಪಿ

ತೃತೀಯ :
ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ
ನಾಟಕ : ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ
ತಂಡ : ಸಮಷ್ಟಿ ಬೆಂಗಳೂರು

ಶ್ರೇಷ್ಠ ಹಾಸ್ಯ ನಟನೆ :

ಶ್ರೀ ಮಂಡ್ಯ ರಮೇಶ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ
ಪರಮೇಶ್ವರ್ ಕೆ.ಎಸ್ – ಸಮಷ್ಟಿ ಬೆಂಗಳೂರು ತಂಡದ
ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ ನಾಟಕದ ವೈದ್ಯಾ ಭುವ ಪಾತ್ರಧಾರಿ.

ಶ್ರೇಷ್ಠ ಬಾಲನಟನೆ :

ದಿ|ಮಂಜುಳಾ ಸತ್ಯನಾರಾಯಣ ಹೆಗಡೆ ಸ್ಮಾರಕ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
ಅಮೃತ
ರಂಗಪಯಣ (ರಿ.) ಬೆಂಗಳೂರು ತಂಡದ
ಗುಲಾಬಿ ಗ್ಯಾಂಗು ನಾಟಕದ ಬಾಲಕಿ ಕಮಲಾದೇವಿ ಪಾತ್ರಧಾರಿಣಿ.

ಮೆಚ್ಚುಗೆ ಬಹುಮಾನಗಳು :

* ಕನ್ನಡ ಸಂಘ, ನಾಗಮಂಗಲ ತಂಡದ ಪಂಚವಟಿ ನಾಟಕದ ಸೀತೆ 1 ಪಾತ್ರಧಾರಿಣಿ ಅರ್ಚನಾ ಮೂರೂರು
* ಸಮಷ್ಟಿ ಬೆಂಗಳೂರು ತಂಡದ ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ ನಾಟಕದ ಕುಂಡಲಿನಿ ಪಾತ್ರಧಾರಿಣಿ ಲಹರಿ
* ಸುಮನಸಾ ಕೊಡವೂರು-ಉಡುಪಿ ತಂಡದ ಅವ್ವ ನಾಟಕದ ಲಂಕೇಶ್ ಪಾತ್ರಧಾರಿ ಅಕ್ಷತ್ ಅಮೀನ್
* ಜಿ.ಪಿ.ಐ.ಇ.ಆರ್. ರಂಗತಂಡ, ಮೈಸೂರು ತಂಡದ ಅಶ್ವತ್ಥಾಮ ನಾಟಕದ ಅಶ್ವತ್ಥಾಮ ಪಾತ್ರಧಾರಿ ಹೆಚ್.ಎಂ. ಶಿವು
* ಭೂಮಿಕಾ (ರಿ.) ಹಾರಾಡಿ ತಂಡದ ಕಾತ್ಯಾಯಿನಿ ನಾಟಕದ ಕಾತ್ಯಾಯಿನಿ ಪಾತ್ರಧಾರಿಣಿ ಮಂಜುಳಾ ಜರ್ನಾಧನ್

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ಸ್, ಎಮ್.ಜಿ.ಎಮ್ ಕಾಲೇಜು, ಉಡುಪಿ ಹಾಗೂ ಹಲವಾರು ಸಂಸ್ಥೆಗಳ, ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನ. 21ರಿಂದ ಡಿಸೆಂಬರ್ 4ರ ವರೆಗೆ 14 ದಿನಗಳ ಕಾಲ ನಡೆದ ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಉಪೇಂದ್ರ ಸೋಮಯಾಜಿ, ಶ್ರೀ ಲಕ್ಷ್ಮೀನಾರಾಯಣ ಭಟ್, ಶ್ರೀಮತಿ ಪಾರ್ವತಿ ಜಿ. ಐತಾಳ್, ವಿನ್ಯಾಸ ಹೆಗಡೆ, ತಪಸ್ವಿ ಹೆಚ್.ಎಂ ಇದ್ದರು.

ಬಹುಮಾನ ವಿತರಣಾ ಸಮಾರಂಭವು 2019ರ ಜನವರಿ 13 ರವಿವಾರ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಸಮಷ್ಟಿ ಬೆಂಗಳೂರು ತಂಡದ “ಮೊಕ್ಕಾಂ ಪೋಸ್ಟ್ ಬೊಂಬಿಲ್ ವಾಡಿ ” ನಾಟಕದ ಮರು ಪ್ರದರ್ಶನ ಇರುವುದು ಎಂದು “ರಂಗಭೂಮಿ” ಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕ : ರವಿರಾಜ್ ಹೆಚ್.ಪಿ. 9845240309

No Comments

Leave A Comment