Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಸಿದ್ದಗಂಗಾ ಶ್ರೀ ಆರೋಗ್ಯವಾಗಿದ್ದಾರೆ: ಡಿಸಿಎಂ

ತುಮಕೂರು: ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯವಾಗಿದ್ದಾರೆ. ಭಕ್ತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆಯೇ ಎನ್ನುವುದನ್ನು ವೈದ್ಯರು ಮಧ್ಯಾಹ್ನದ ವೇಳೆ ತಿಳಿಸಲಿದ್ದಾರೆ. ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದ ರಿಪೋರ್ಟ್ಸ್‌ಗಳನ್ನು ನುರಿತ ತಜ್ಞರಿಗೆ ತೋರಿಸುತ್ತೇವೆ. ಅವರು ನೀಡುವ ಸಲಹೆ ಅನುಸರಿಸುವುದಾಗಿ ತಿಳಿಸಿದರು.

ಶ್ರೀಗಳು ಎಂದಿನಂತೆ ಲವಲವಿಕೆಯಲ್ಲಿದ್ದಾರೆ. ನಾನು ಹೋಗಿ ಭೇಟಿ ಮಾಡಿದಾಗ ಎಂದಿನಂತೆ ಚೆನ್ನಾಗಿದ್ದೀರಾ? ಎಷ್ಟೊತ್ತಿಗೆ ಬಂದಿರಿ? ಎಂದು ಕೇಳಿದರು. ಹಾಗೆಯೇ ತಮಗೆ ಎಷ್ಟು ವಯಸ್ಸಾಯಿತು ಎಂದು ಕೇಳಿದರು. 111 ಎಂದಾಗ ಬಹಳ ಆಯಿತು ಎಂದು ನಗುನಗುತ್ತಲೇ ಹೇಳಿದರು. ನಂತರ ಪ್ರಸಾದ ಸ್ವೀಕರಿಸಿ ಹೋಗಿ ಎಂದು ಹೇಳಿರುವುದಾಗಿ ಡಿಸಿಎಂ ತಿಳಿಸಿದರು.

No Comments

Leave A Comment