Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ರಜನಿ-ಅಕ್ಷಯ್‌ 2.0 : ವಾರದೊಳಗೆ 500 ಕೋಟಿ ಮೀರಿದ ಜಾಗತಿಕ ಗಳಿಕೆ

ಹೊಸದಿಲ್ಲಿ : ಸೂಪರ್‌ಸ್ಟಾರ್‌ ರಜನೀಕಾಂತ್‌ ಮತ್ತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ 2.0 ಚಿತ್ರ ಬಿಡುಗಡೆಗೊಂಡ ಒಂದು ವಾರದೊಳಗೆ 500 ಕೋಟಿ ರೂ. ಮೀರಿದ ಸಂಪಾದನೆಯನ್ನು ದಾಖಲಿಸಿದೆ.

ಸುಮಾರು ಮೂರು ವರ್ಷಗಳ ಸುದೀರ್ಘ‌ ಕಾಯುವಿಕೆಯ ಬಳಿಕ ತೆರೆಕಂಡಿರುವ ಈ ಚಿತ್ರದ ಹಿಂದಿ ಅವತರಣಿಕೆಯ ಜತೆಗೆ ಕಾಣಿಸಿಕೊಂಡಿರುವ ಕರಣ್‌ ಜೋಹರ್‌ ಅವರು ಚಿತ್ರ 500 ಕೋಟಿ ರೂ. ಮೀರಿದ ಜಾಗತಿಕ ಗಳಿಕೆಯನ್ನು ದಾಖಲಿಸಿರುವ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಧರ್ಮಾ ಮೂವೀಸ್‌ ನಲ್ಲಿ ನಾವು 2.0 ಚಿತ್ರದ ಈ ಅಭೂತಪೂರ್ವ ಸಾಧನೆಗೆ ತುಂಬ ಸಂತಸಗೊಂಡಿದ್ದೇವೆ; ಹೆಮ್ಮೆ ಪಟ್ಟಿದ್ದೇವೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

2.0 ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದವರು ಶಂಕರ್‌. ಇದು 500 ಕೋಟಿ ರೂ. ವೆಚ್ಚದ ನಿರ್ಮಾಣ. 3ಡಿ ಯಲ್ಲಿ ನಿರ್ಮಾಣಗೊಂಡ ಮತ್ತು ವಿಶ್ವಾದ್ಯಂತ 1,500 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಂಡ ಮೊತ್ತ ಮೊದಲ ಭಾರತೀಯ ಚಿತ್ರ.

No Comments

Leave A Comment