Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಬೆಳಗಾವಿ : ಭೀಕರ ಅಪಘಾತಕ್ಕೆ 6 ಮಂದಿ ದಾರುಣ ಸಾವು

ಬೆಳಗಾವಿ: ಗೋಕಾಕ್‌ನ ಹಿರೇನಂದಿ ಗ್ರಾಮದ ಬಳಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೊಲೆರೋ ಮತ್ತು  ಕಬ್ಬು ತುಬ್ಬಿದ ಟ್ರ್ಯಾಕ್ಟರ್‌ ನಡುವೆ ಈ ಅವಘಡ ಸಂಭವಿಸಿದ್ದು, ಬೊಲೆರೋದಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ.ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು , ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತ ದುರ್‌ದೈವಿಗಳು  ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ.

ಮೃತರು ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದವರಾಗಿದ್ದು, ಯಲ್ಲವ್ವ ಖಂಡ್ರೆ(60), ನೀಲವ್ವ(40), ಅನಸೂಯಾ ನಾಯ್ಕರ್‌(28), ಪಾರವ್ವ ಖಂಡ್ರೆ(30), ಬಿಮಸೆಪ್ಪ ಪೂಜಾರಿ(38) ಮತ್ತು ಮಹಾದೇವ(30) ಎಂದು ತಿಳಿದು ಬಂದಿದೆ.

ಗೋಕಾಕ್‌ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment