Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ರಾಕಿಂಗ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನ, ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ

ಬೆಂಗಳೂರು: ಸ್ಯಾಂಡಲ್ ವುಡ್ ತಾರಾ ಜೋಡಿ  ಯಶ್ -ರಾಧಿಕಾ ಪಂಡಿತ್ ಮನೆಗೆ  ಹೊಸ ಅತಿಥಿಯ ಆಗಮನವಾಗಿದೆ. ರಾಕಿಂಗ್ ಸ್ಟಾರ್  ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ  ಬೆಳಗ್ಗೆ 6-10 ಕ್ಕೆ ಹೆಣ್ಣು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದಾರೆ.  ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಶ್ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ವೈದ್ಯರು ದಿನಾಂಕ ನೀಡಿದ್ದರೂ ಅದಕ್ಕೂ  ಒಂದು ವಾರ ಮುಂಚಿತವಾಗಿಯೇ  ರಾಧಿಕಾ ಪಂಡಿತ್ ತಾಯಿಯಾಗಿದ್ದು, ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.  ಪುಟ್ಟ ಅತಿಥಿಯನ್ನು ಮನೆಗೆ ಬರಮಾಡಿಕೊಂಡಿದ್ದು, ಯಶ್ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ  ಅಮೆರಿಕಾದ  ಚಿಕಾಗೋದಲ್ಲಿ ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಹಾಗೂ ಅತ್ತಿಗೆ ಸಹನ ಅವರಿಗೆ ಹೆಣ್ಣು ಮಗು ಜನಿಸಿತ್ತು. 

ಯಶ್ ಹಾಗೂ ರಾಧಿಕಾ ತಮ್ಮ ಸೊಸೆಗೆ ರಿಯಾ ಎಂದು ಹೆಸರಿಟ್ಟು ಬಂದಿದ್ದರು. ಈಗ ತಮ್ಮಗೂ ಹೆಣ್ಣು ಮಗು ಆಗಿದ್ದು, ಯಶ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

No Comments

Leave A Comment