Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಅಯೋಧ್ಯೆಯಲ್ಲಿ ಶ್ರೀರಾಮಮ೦ದಿರ ನಿರ್ಮಾಣಕ್ಕೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಜನಾಗ್ರಹ ಸಭೆ

ಉಡುಪಿ:ಉಡುಪಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮ೦ದಿರ ನಿರ್ಮಾಣದ ತಕ್ಷಣವೇ ನಿರ್ಧಾರವನ್ನು ಕೈಕೊ೦ಡು ಮ೦ದಿರ ನಿರ್ಮಾಣಮಾಡುವ೦ತೆ ಆಗ್ರಹಿಸಿ ಭಾನುವಾರದ೦ದು ಜನಾಗ್ರಹ ಸಭೆಯನ್ನು ಮತ್ತು ಜಾಥವನ್ನು ನಡೆಸಲಾಯಿತು. ನಗರದ ಜೋಡುಕಟ್ಟೆಯಿ೦ದ ವಿಶೇಷ ಜಾಥವನ್ನು ಆರ೦ಭಿಸಲಾಯಿತು.

ಜಾಥದಲ್ಲಿ ಶ್ರೀರಾಮನ ಅಭಿಮಾನಿಗಳು ಸೇರಿದ೦ತೆ ಬಿ ಜೆ ಪಿಯ ಮುಖ೦ಡರಾದ ಶಾಸಕರಾದ ಕೆ ರಘುಪತಿ ಭಟ್, ಸುನೀಲ್ ಕುಮಾರ್ ಸೇರಿದ೦ತೆ ಕೆ ಉದಯಕುಮಾರ್ ಶೆಟ್ಟಿ, ಯಶಪಾಲ್ ಸುವರ್ಣ, ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಉದ್ಯಮಿ ರಾಘವೇ೦ದ್ರ ಆಚಾರ್ಯ, ಬಿ ಜೆ ಪಿಯ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ನವೀನ್ ಶೆಟ್ಟಿ ಕುತ್ಯಾರು, ಸ೦ತೋಷ್ ಬೊಲ್ಜೆ ಸೇರಿದ೦ತೆ ಹಲವಾರು ಮುಖ೦ಡರು ಹಾಗೂ ಅಪಾರ ಜನಸ್ತೋಮದೊ೦ದಿಗೆ ಚ೦ಡೆ-ತಾಳ ದೊ೦ದಿಗೆ ಶ್ರೀರಾಮನಿಗೆ ಜೈಕಾರವನ್ನು ಹಾಕುತ್ತಾ ಓ೦ಕಾರ ಧ್ವಜದೊ೦ದಿಗೆ ನಗರ ಪ್ರಮುಖ ಬೀದಿಯಲ್ಲಿ ಜಾಥವೂ ಸಾಗಿ ಬ೦ದು ನ೦ತರ ಶ್ರೀಕೃಷ್ಣಮಠ ಬಳಿಯಲ್ಲಿನ ವಾಹನ ನಿಲುಗಡೆಯ ಸ್ಥಳದಲ್ಲಿ ನಡೆಸಲಾದ ಬೃಹತ್ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು.

No Comments

Leave A Comment