Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಪೂಂಜಾಲಕಟ್ಟೆ: ವೃದ್ಧ ಪತಿ ಪತ್ನಿ ಆತ್ಮಹತ್ಯೆ

ಪೂಂಜಾಲಕಟ್ಟೆ : ವೃದ್ಧ ದಂಪತಿಗಳು ಆತ್ಮಹತ್ಯೆಗೈದ ಘಟನೆ ಗುರುವಾರ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬತ್ತ ನಾಡಿ ಎಂಬಲ್ಲಿ ನಡೆದಿದೆ.

ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪ್ರೇಮನಾಥ (65)  ಮತ್ತು ಅವರ ಪತ್ನಿ ಚಂದ್ರಾವತಿ ( 60) ಆತ್ಮಹತ್ಯೆ ಮಾಡಿಕೊಂಡವರು. ಪ್ರೇಮನಾಥ ಅವರು ಬಾವಿಯ ಕಂಬಕ್ಕೆ ನೇಣು ಬಿಗುದುಕೊಂಡಿದ್ದು, ಪತ್ನಿ ಚಂದ್ರಾವತಿ ಮನೆಯ ಪಕ್ಕಾಸಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮನಾಥ ಅವರು ಕಾರು ಚಾಲನೆ ವೃತ್ತಿ ಮಾಡಿಕೊಂಡಿದ್ದರು.  ದಂಪತಿಗೆ ಮೂವರು ಪುತ್ರಿಯರು ಮತ್ತು ಪುತ್ರನಿದ್ದು, ಪುತ್ರ ಬೇರೆ ಕಡೆ ವಾಸವಾಗಿದ್ದಾರೆ. ಗುರುವಾರ ಬೆಳಗ್ಗೆ ಪುತ್ರನಿಗೆ ಕರೆ ಮಾಡಿ ನನ್ನ ಕಥೆ ಮುಗಿಯಿತು ಎಂದಿದ್ದರು ಎಂದು ತಿಳಿದು ಬಂದಿದೆ. ಪುತ್ರ ಮನೆಗೆ ಬಂದಾಗ ತಂದೆ ತಾಯಿ ಮೃತರಾಗಿರುವುದು ಕಂಡು ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment