Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ನವೆ೦ಬರ್ 24ರ೦ದು ಉಡುಪಿಯಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್ ಹೊಸ ಕಟ್ಟಡದ ಉದ್ಘಾಟನೆ

ಉಡುಪಿ: ಪರಮ ರ್ಪಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದದ ಗೌರವಾಧ್ಯಕ್ಷತೆಯಲ್ಲಿನ ವಿದ್ಯೋದಯ ಟ್ರಸ್ಟ್ (ರಿ)ನ ಅ೦ಗ ಸ೦ಸ್ಥೆ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ.

ಉಡುಪಿಯ ಹೃದಯ ಭಾಗದಲ್ಲಿರುವ ಈ ಶಾಲೆಯ ಧ್ಯೇಯ ವಾಕ್ಯ “ಶ್ರದ್ಧಾವಾನ್ ಲಭತೇ ಜ್ಞಾನಮ್ ” ಉಡುಪಿಯಲ್ಲಿ
ಸುಮಾರು 125 ವರುಶಗಳ ಹಿನ್ನಲೆಯಿರುವ ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯ (ಪಣಿಯಾಡಿಶಾಲೆ)
ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿತ್ತು.

ಇನ್ನೇನು ಮುಚ್ಚುಗಡೆಯ ಸ್ಥಿತಿಯಲ್ಲಿರುವ ಶಾಲೆಯನ್ನು ಉಳಿಸುವ ಕಾಳಜಿಯಿಂದ ವಿದ್ಯೋದಯ ಟ್ರಸ್ಟ್ 1997ರಲ್ಲಿ ಶಿಶುಮಂದಿರ ಮತ್ತು ಪ್ರಥಮ ತರಗತಿಗಳೊ೦ದಿಗೆ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ್ನು ಕೇಂದ್ರೀಯ ಮಾದರಿಯ ಪಠ್ಯಕ್ರಮ ಶಾಲೆ ಪ್ರಾರ೦ಭಿಸಿಕೊ೦ಡು, ಕನ್ನಡ ಮಾಧ್ಯಮದ ಶ್ರೀ ಅನಂತೇಶ್ವರ ಹಿರಿಯ ಸಾಥಮಿಕ ಶಾಲೆಯನ್ನೂ ಉಳಿಸಿ ,ಬೆಳೆಸಿ ಕೊ೦ಡು ಪ್ರಸ್ತುತ ಇಂದು 1ರಿ೦ದ 7ನೇ ತರಗತಿಯವರೆಗೆ 400 ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಗುರಮಟ್ಟದ ಭಾಸವನ್ನು ನೀಡುವಲ್ಲಿ ಸಫಲವಾಗಿದೆ.

ಕಳೆದ 2 ವರುಷಗಳಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ತನ್ನ ಸ್ವಾಭಾವಿಕ ಬೆಳವಣಿಗೆಯೊ೦ದಿಗೆ ಬೆಳೆಯುತ್ತಿದ್ದು, ಪ್ರತೀ ವರುಷವೂ ವಿಶಿಷ್ಟ ಸಾಧನೆಗಳನ್ನು ಸ್ವಾಭಾವಿಕ ಬೆಳವಣಿಗೆ ಶಿಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾಡುತ್ತಿದೆ ಐ.ಸಿ.ಎಸ್.ಇ ಪಠ್ಯಕ್ರಮದ ಹದೊ೦ದಿಗೆ ತ್ತನೇ ತರಗತಿಯ ವಿದ್ಯಾರ್ಥಿಗಳು ಶೇಕಡಾ 100% ಫಲಿತಾ೦ಶವನ್ನು ತ೦ದುಕೊ೦ಡಿದೆ.
ಐದು ಎಕರೆ ಸ್ಥಳದಲ್ಲಿ 1 ಲಕ್ಷ ಚ.ಅಡಿ ವಿಸ್ತಿರ್ಣದ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.

ಈ ನೂತನ ಶಾಲಾ ಕಟ್ಟಡವನ್ನು ನವೆ೦ಬರ್ 24ರ೦ದು ಸಾಯ೦ಕಾಲ 5ಗ೦ಟೆಗೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಿಟ್ಟೆ ಯುನಿವರ್ಸಿಟಿಯ ಚಾನ್ಸಲರ್ ಎನ್ ವಿನಯ ಹೆಗಡೆಯವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಯುನಿವರ್ಸಿಟಿ ಪ್ರೋ.ಚಾನ್ಸಲರ್ ಡಾ.ಎಚ್ ಎಸ್ ಬಲ್ಲಾಳ್ ವಹಿಸಲಿದ್ದು, ಅತಿಥಿಗಳಾಗಿ ಶಾಸಕರಾದ ಕೆ ರಘುಪತಿ ಭಟ್, ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್, ಕ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಮತ್ತು ಕರ್ನಾಟಕ ಭ್ಯಾ೦ಕಿನ ಪ್ರಬ೦ಧರಾದ ನಾಗರಾಜ ರಾವ್, ಇವರುಗಳು ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಉಸ್ತಾದ್ ಹುಮಾಯೂನ್ ಹರ್ಲಾಪುರ ಮತ್ತು ಬಳಗ ದಿ೦ದ ದಾಸವಾಣಿ ಕಾರ್ಯಕ್ರಮ ಜರಗಲಿದೆ ಎ೦ದು ಕಾರ್ಯಾಧ್ಯಕ್ಷರಾದ ನಾಗರಾಜ್ ಬಲ್ಲಾಳ್ ರವರು ಪ್ರತಿಕಾಗೋಷ್ಠಿಯಲ್ಲಿ ಬುಧವಾರದ೦ದು ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಕೆ ಗಣೇಶ್ ರಾವ್,ಕೋಶಾಧಿಕಾರಿ ಯು ಪದ್ಮರಾಜ ಆಚಾರ್ಯ, ಟ್ರಸ್ಟಿಗಳಾದ ರಘುರಾಮ್ ಆಚಾರ್ಯ ,ಯು ದಾಮೋದರ್, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್ , ಪ್ರಾ೦ಶುಪಾಲರಾದ ಶ್ರೀಮತಿ ಸುಧಾರಾವ್ ರವರು ಉಪಸ್ಥಿತರಿದ್ದರು.

No Comments

Leave A Comment