Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಉಡುಪಿ-ಕಲ್ಯಾಣಪುರ ದೇವಳದಲ್ಲಿ ಚು೦…ಚು೦ ಚಳಿಯಲ್ಲಿ “ವಿಶ್ವರೂಪದರ್ಶನ”

ಉಡುಪಿಯ ತೆ೦ಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹಾಗೂ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬಾನುವಾರ ಮುಂಜಾನೆ 5 ಕ್ಕೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ , ಕಾಕಡ ಆರತಿ , ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ “ವಿಶ್ವರೂಪ ದರ್ಶನ” ನೆರವೇರಿತು.

ಉಡುಪಿಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ರಾಮನ ಅವತಾರ , ತಿರುಮಲ ಬೆಟ್ಟದ ಶ್ರೀನಿವಾಸ ದರ್ಶನ, ಅರ್ಧನಾರಿಶ್ವರ, ಮಹಾ ಗಣಪತಿ , ಕಡಗೋಲು ಕೃಷ್ಣ , ಪಾಂಡುರಂಗ ವಿಠ್ಠಲ , ರಂಗೋಲಿಯ ಚಿತ್ತಾರ , ಹೂಗಳಿಂದ ರಚಿಸಿದ ರಂಗೋಲಿ ,ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಯತು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು.

ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು. ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರು ಮತ್ತು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಸಮಾಜ ಬಂದವರು ಉಪಸ್ಥಿತರಿದ್ದರು.

ಕಲ್ಯಾಣಪುರ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ಕೆ ಅನ೦ತಪದ್ಮನಾಭ ಕಿಣಿ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಸಮಾಜಭಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment