Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಗ್ಯಾಸ್‌ ಸಿಲಿಂಡರ್‌ಗಲಿದ್ದ ಲಾರಿ ಪಲ್ಟಿ,ಸ್ಫೋಟ:ಚಾಲಕ ಸಜೀವ ದಹನ

ಸಾಗರ: ತಾಲೂಕಿನ ಮಂಡಿಗೆಹಳ್ಳ ಎಂಬಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ ಲಾರಿ ಪಲ್ಟಿ ಯಾಗಿ ಅಗ್ನಿ  ಅವಘಡ ಸಂಭವಿಸಿದ್ದು, ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ.

ಸಾಗರದಿಂದ ಕಾರ್ಗಲ್‌ ಕಡೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ  ಇಂಡಿಯನ್‌ ಗ್ಯಾಸ್‌ಗೆ ಸೇರಿದ ಲಾರಿ ಪಲ್ಟಿಯಾಗಿದ್ದು, 20 ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡು ಅವಘಡ ಸಂಭವಿಸಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ಕುರಿತಾಗಿ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಿದೆ.

No Comments

Leave A Comment