Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಗುಜರಾತ್‌ ದೊಂಬಿ:ನ.19ರಂದು ಸುಪ್ರೀಂನಿಂದ ಮೋದಿ clean chit ವಿಚಾರಣೆ

ಹೊಸದಿಲ್ಲಿ : 2002ರ ಗುಜರಾತ್‌ ದೊಂಬಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಮಾಜಿ ಕಾಂಗ್ರೆಸ್‌ ಸಂಸದ ಎಹಸಾನ್‌ ಜಾಫ್ರಿ ಅವರ ಪತ್ನಿ , ವಿಧವೆ, ಝಾಕಿಯಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿಸಿದ್ದು ಇದೇ ನ.19ರಂದು ವಿಚಾರಣೆ ಕೈಗೊಳ್ಳಲಿದೆ.

ಪ್ರಧಾನಿ ಮೋದಿ ಮತ್ತು ಇತರರಿಗೆ 2002ರ ಗುಲ್‌ಬರ್ಗ್‌ ಸೊಸೈಟಿ ನರಮೇಧ ಪ್ರಕರಣದಲ್ಲಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಎಸ್‌ಐಟಿ ಕ್ಲೀನ್‌ ಚಿಟ್‌ ಎತ್ತಿ ಹಿಡಿದಿತ್ತು. ಮಾತ್ರವಲ್ಲದೆ ಈ ಪ್ರಕರಣದ ವಿಸ್ತೃತ ತನಿಖೆಗಾಗಿ ಉನ್ನತ ವೇದಿಕೆಯನ್ನು ಸಂಪರ್ಕಿಸುವಂತೆ ಝಾಕಿಯಾ ಜಾಫ್ರಿಗೆ ನಿರ್ದೇಶಿಸಿತ್ತು.

2002ರ ಫೆಬ್ರವರಿ 8ರಂದು ನಡೆದಿದ್ದ  ಅಹ್ಮದಾಬಾದ್‌ನ ಗುಲ್‌ಬರ್ಗ್‌ ಸೊಸೈಟಿ ನರಮೇಧದಲ್ಲಿ ಕಾಂಗ್ರೆಸ್‌ ಸಂಸದ ಎಹಸಾನ್‌ ಜಾಫ್ರಿ ಸೇರಿದಂತೆ ಕನಿಷ್ಠ 68 ಮಂದಿ ಹತರಾಗಿದ್ದರು. 2008ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ಎಸ್‌ಐಟಿ, ಜಾಫ್ರಿ ಆರೋಪಗಳ ತನಿಖೆಯನ್ನು ನಡೆಸಿತ್ತು.

No Comments

Leave A Comment