Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಹೊನ್ನಾವರ : ಕಾರು ಭೀಕರ ಅವಘಡ ; 3 ಬಲಿ ; 8 ಮಂದಿಗೆ ಗಾಯ

ಹೊನ್ನಾವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206 ರ ಆರೋಳ್ಳಿ ಕ್ರಾಸ್‌ನಲ್ಲಿ  ಸ್ಕಾರ್ಪಿಯೋ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಗುಡ್ಡಕ್ಕೆ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿ  , 8 ಮಂದಿ ಗಂಭೀರವಾಗಿ ಗಾಯಗೊಂಡ  ಭೀಕರ ಅವಘಡ ಮಂಗಳವಾರ ನಸುಕಿಕ 2.30 ರ ವೇಳೆಗೆ ನಡೆದಿದೆ.

ಮೃತ ದುರ್ದೈವಿಗಳು ಸಾಗರ ತಾಲೂಕಿನ ಆನಂದಪುರ ನಿವಾಸಿಗಳಾಗಿದ್ದು , ಗೋವಾಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸಾಗುತ್ತಿದ್ದರು ಎನ್ನಲಾಗಿದೆ.

ಮೃತರನ್ನು ರುಬಿಯಾ(42), ಫಾತಿಮಾಬಿ(65)ಮತ್ತು ಬಾಬು ಸಾಬ್‌ (65) ಎಂದು ಗುರುತಿಸಲಾಗಿದೆ.
8 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತೀ ವೇಗದಲ್ಲಿ ಕಾರನ್ನು ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ.

ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment