Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ – ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ/Union minister Ananth Kumar passes away

ಬೆಂಗಳೂರು: ಕಳೆದ ಕೆಲ ಸಮಯಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ.

ಅವರಿಗೆ 59 ವರ್ಷ ವಯಸ್ಸಾಗಿತ್ತು.ಕ್ಯಾನ್ಸರ್ ಚಿಕಿತ್ಸೆಗೆ ಕಳೆದ ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಖಾಸಗಿ ಆಸ್ಪತ್ರೆಯಿಂದ ಇದೀಗ ಅವರ ನಿವಾಸ ಬಸವನಗುಡಿಯಲ್ಲಿರುವ ಸುಮೇರ ನಿವಾಸದಲ್ಲಿರಿಸಲಾಗಿದೆ.

ಅವರ ಬಂಧು-ಮಿತ್ರರು ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ 9 ಗಂಟೆ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಪೊಲೀಸರಿಂದ ‌ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಬೆಂಗಳೂರು: ಕೇಂದ್ರ ಸಚಿವ ಅನಂತ್​ ಕುಮಾರ್​ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಟ್ವೀಟ್ ನಲ್ಲಿ, ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ವಾರ್ತೆ ಕೇಳಿ ತೀವ್ರ ದುಃಖವಾಗಿದೆ. ಅವರ ಅಗಲಿಕೆ ಕರ್ನಾಟಕ ರಾಜ್ಯದ ಜನತೆಗೆ ಮತ್ತು ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.ನನ್ನ ಅತಿ ಅಮೂಲ್ಯ ಸಹೋದ್ಯೋಹಿ, ಸ್ನೇಹಿತ ಅನಂತ್ ಕುಮಾರ್ ನಿಧನ ನನಗೆ ತೀವ್ರ ದುಃಖ ತಂದಿದೆ.

ಅವರೊಬ್ಬ ಗಮನಾರ್ಹ ನಾಯಕ, ಅವರು ಚಿಕ್ಕ ವಯಸ್ಸಿನಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು ಮತ್ತು ಅತ್ಯಂತ ಶ್ರದ್ಧೆ ಮತ್ತು ಸಹಾನುಭೂತಿಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಿದರು. ಅವರ ಉತ್ತಮ ಕೆಲಸಗಳಿಗೆ ಅವರನ್ನಿಂದು ನನೆಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಆತ್ನೀಯ ಸ್ನೇಹಿತ, ಉತ್ತಮ ರಾಜಕಾರಣಿ ಆಗಿದ್ದ ಅನಂತ ಕುಮಾರ್ ಅವರ ಅಗಲಿಕೆ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದು ನಷ್ಟವುಂಟು ಮಾಡಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

A six-time member of Parliament, Kumar had climbed the political ladder steadily from being an Rashtriya Swayamsevak Sangh worker to be the Union minister in his thirties.

Union Parliamentary Affairs Minister Ananth Kumar died at a private hospital in Bengaluru in the early hours of Monday after battling lung cancer for several months, hospital authorities said.

Kumar, 59, breathed his last around 2 am with his wife Tejaswini and two daughters by his bedside, Sankara Hospital Director Nagaraj said.

He was later under treatment at the Sankara Hospital Bengaluru.

Bharatiya Janata Party sources said the body of Kumar would be kept at the National College Ground, which falls in his Bangalore South Lok Sabha constituency, for public homage.

Details of funeral arrangements were being worked out, the sources said.

Kumar passed away from complications following cancer and infections, his party office said in a statement.

He had been on the ventilator in the Intensive Care Unit for the last few days, it said.

Expressing his grief, Prime Minister Narendra Modi said he was extremely saddened by the passing away of his “valued colleague and friend” and described him as a remarkable leader, who entered public life at a young age and went on to serve society with utmost diligence and compassion.

He will always be remembered for his good work, he said in a tweet.

“Ananth Kumar Ji was an able administrator, who handled many ministerial portfolios and was a great asset to the BJP organisation. He worked hard to strengthen the party in Karnataka, particularly in Bengaluru and surrounding areas. He was always accessible to his constituents,” Modi said in another tweet.

The prime minister said he spoke to Kumar’s wife Dr Tejaswini and expressed condolences.

“My thoughts are with his entire family, friends and supporters in this hour of grief and sadness. Om Shanti,” he said.

A six-time member of Parliament, Kumar had climbed the political ladder steadily from being an Rashtriya Swayamsevak Sangh worker to be the Union minister in his thirties.

Kumar had been in the inner circle of the central leadership of the BJP — be it during the heydays of Atal Bihari Vajpayee or L K Advani and now Narendra Modi.

He joined the BJP in 1987 and never looked back, as he held posts of state secretary, state president of the Yuva Morcha, general secretary and national secretary.

Along with state BJP chief Yeddyurappa, Kumar is among a few party leaders who can be credited for the growth of BJP in Karnataka, as they built the party and bringing it to power in 2008, making it the first saffron party government in the South..

Kumar first got elected to Lok Sabha in 1996 from Bangalore South, the constituency, which remained his bastion till his passing away.

No Comments

Leave A Comment