Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಛತ್ತೀಸ್‌ಗಡ:ಚುನಾವಣೆ ಮುನ್ನಾ ದಿನ ನಕ್ಸಲ್‌ ಅಟ್ಟಹಾಸ;ಭದ್ರತೆ ಸವಾಲು!

ರಾಯ್‌ಪುರ್‌: ವಿಧಾನ ಸಭಾ ಚುನಾವಣಾ ಮತದಾನ ನಡೆಯುವ ಮುನ್ನಾದಿನ ಭಾನುವಾರ ಛತ್ತೀಸ್‌ಗಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಹಲವಡೆ ಸುಧಾರಿತ ಸ್ಫೋಟಕಗಳನ್ನು ಬಳಸಿ ಸ್ಫೋಟಗಳನ್ನು ನಡೆಸಿದ್ದಾರೆ. ದಾಳಿಯಲ್ಲಿ ಬಿಎಸ್‌ಎಫ್ ಎಎಸ್‌ಐ ಮಹೇಂದ್ರ ಸಿಂಗ್‌ ಅವರು ಗಾಯಗೊಂಡಿದ್ದಾರೆ.

ಕಾಂಕೇರ್‌ ಜಿಲ್ಲೆಯ ಕೊಯಾಲಿ ಬೆಡಾದಲ್ಲಿ  ಯೋಧರು ಕಾರ್ಯನಿರತರಾಗಿದ್ದ ವೇಳೆ ನಕ್ಸಲರು ದಾಳಿ ನಡೆಸಿದ್ದಾರೆ. ಗಾಯಾಳು ಎಎಸ್‌ಐ  ಮಹೇಂದ್ರ ಕುಮಾರ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣೆಗಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಆದರೂ 6 ಕಡೆಗಳಲ್ಲಿ  ಐಇಡಿಗಳನ್ನು ಹೂತು ನಕ್ಸಲರು ದುಷ್ಕೃತ್ಯ ಎಸಗಿದ್ದಾರೆ.

ಇನ್ನೊಂದೆಡೆ ಬಿಜಾಪುರ್‌ ಜಿಲ್ಲೆಯ ಅರಣ್ಯವೊಂದರಲ್ಲಿ ನಕ್ಸಲರು ಮತ್ತು ಯೋಧರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು ಓರ್ವ ನಕ್ಸಲನನ್ನು ಹತ್ಯೆಗೈಯಲಾಗಿದೆ.

No Comments

Leave A Comment