Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಡೀಲ್ ಕೇಸ್; ರೆಡ್ಡಿ ಮನೆ ಮೇಲೆ ದಾಳಿ,ಸ್ಫೋಟಕ ಸತ್ಯ ಬಾಯ್ಬಿಟ್ಟ ಫರೀದ್!

ಬಳ್ಳಾರಿ/ಬೆಂಗಳೂರು: ಆ್ಯಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಾಲೀಕ ಸೈಯದ್ ಅಹಮದ್ ಫರೀದ್ ಸಿಸಿಬಿ ಅಧಿಕಾರಿಗಳ ಮುಂದೆ ಜನಾರ್ದನ ರೆಡ್ಡಿ ಡೀಲ್ ಪ್ರಕರಣದ ಕುರಿತು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿದೆ.

ಏತನ್ಮಧ್ಯೆ ಸಿಸಿಬಿ ಅಧಿಕಾರಿಗಳು ಗುರುವಾರ ಬಳ್ಳಾರಿ ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿ ಹಾಗೂ ಅಲಿಖಾನ್ ಬೆಂಗಳೂರಿನ ಆರ್ ಟಿ ನಗರದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ 5 ಸಜೀವ ಗುಂಡುಗಳ ಬಗ್ಗೆ ಮನೆಯವರು ದಾಖಲೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.

57ಕೆಜಿ ಚಿನ್ನದ ಗಟ್ಟಿಗಾಗಿ ರೆಡ್ಡಿ ಮನೆಯ ಗೋಡೆ, ಬೀರು, ಕಪಾಟುಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಮತ್ತೆ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳೂ ಕೂಡಾ ರೆಡ್ಡಿ ಮನೆಗೆ ಆಗಮಿಸಿದ್ದಾರೆ.

ಚಿನ್ನಕ್ಕಾಗಿ ಶೋಧ ಕಾರ್ಯ:

ಶೋಧದ ವೇಳೆ ಸಿಸಿಬಿಗೆ ಸಿಕ್ಕಿರುವ ಪತ್ರಗಳ ಆಧಾರದ ಮೇಲೆ 57 ಕೆಜಿ ಚಿನ್ನದ ಗಟ್ಟಿ ಎಲ್ಲಿದೆ ಎಂಬ ಮಾಹಿತಿಯ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಬಂಧನ ಭೀತಿಗೊಳಗಾಗಿದ್ದ ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಬುಧವಾರ ಮಧ್ಯಂತರ ಜಾಮೀನು ಪಡೆದಿದ್ದರೂ ಕೂಡಾ ನಾಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಮಾತ್ರವಲ್ಲ ದುಬೈನಲ್ಲೂ ಸಾಮ್ರಾಜ್ಯ ವಿಸ್ತರಿಸಿದ್ದ ಫರೀದ್?

ಹೂಡಿಕೆದಾರರಿಗೆ 600 ಕೋಟಿ ರೂಪಾಯಿ ವಂಚಿಸಿರುವ ಫರೀದ್ ಬೆಂಗಳೂರಿನಲ್ಲಿ ಮಾತ್ರವಲ್ಲ ದುಬೈನಲ್ಲೂ ಕೆಲವು ತಿಂಗಳ ಹಿಂದೆ ಕಂಪನಿ ಸ್ಥಾಪಿಸುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿರುವ ಬಗ್ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಏನಿದು ಪ್ರಕರಣ:

ಹೂಡಿಕೆದಾರರಿಗೆ 600 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿ ಜಾರಿ ನಿರ್ದೇಶನಾಲಯ ತನಿಖೆಗೆ ಗುರಿಯಾಗಿರುವ ಬೆಂಗಳೂರಿನ ಆ್ಯಂಬಿಡೆಂಟ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ, ಇ.ಡಿ. ತನಿಖೆಯಿಂದ ಪಾರಾಗಲು ನೆರವು ನೀಡುವುದಾಗಿ ಜನಾರ್ದನ ರೆಡ್ಡಿ 20 ಕೋಟಿ ರೂಪಾಯಿ ಡೀಲ್ ಕುದುರಿಸಿದ್ದಾರೆ ಎನ್ನಲಾಗಿತ್ತು. ಈ ಮೆಗಾ ಡೀಲ್ ಸಿಸಿಬಿ ತನಿಖೆಯಲ್ಲಿ ಬಹಿರಂಗವಾಗಿತ್ತು.

No Comments

Leave A Comment