Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಹೆಣ್ಣಿನ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ: ನಟಿ ಪಾರ್ವತಿ

ತಿರುವನಂತಪುರಂ: ಮೀಟೂ ಆರೋಪ ಮಾಡಿದ್ದ ನಟಿ ಪಾರ್ವತಿ ಅವರು ಇದೀಗ ಮಹಿಳೆಯ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ ಎಂದು ಹೇಳಿದ್ದಾರೆ.
ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ಇದೀಗ ಸುಪ್ರೀಂ ತೀರ್ಪಿನ ಪರ ನಟಿ ಪಾರ್ವತಿ ಬ್ಯಾಟಿಂಗ್ ಮಾಡಿದ್ದಾರೆ.

ಸುಪ್ರೀಂ ತೀರ್ಪಿನ ನಂತರ ಕೆಲ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನ ಮಾಡಿ ವಿಫಲರಾಗಿದ್ದರು. ಇದಗೀ ಈ ಬಗ್ಗೆ ಪಾರ್ವತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ತೀರ್ಪನ್ನು ಸ್ವಾಗತಿಸಿರುವ ಪಾರ್ವತಿ ಮುಟ್ಟಾಗುವುದರಿಂದಲೇ ಮಕ್ಕಳು ಜನಿಸುತ್ತಾರೆ. ಆದರೆ ಮುಟ್ಟಾದಾಗ ಅಪವಿತ್ರವೆಂದು ಯಾಕೆ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹಿಂದಿನಿಂದಲೂ ಕೂಡ ಮುಟ್ಟಾದಾಗ ಅಪವಿತ್ರಳು ಎಂಬ ಭಾವನೆಯನ್ನು ತಲೆಗೆ ತುಂಬಲಾಗಿದೆ. ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಕೇವಲ ಯೋನಿಯಲ್ಲಿಲ್ಲ ಎಂದು ಪಾರ್ವತಿ ಹೇಳಿದ್ದಾರೆ.
No Comments

Leave A Comment