Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

“ಮಾತೃ ಭಾಷೆಯನ್ನು ಪ್ರೀತಿಸಿ, ಕನ್ನಡವನ್ನು ಫೋಷಿಸಿ”-ಶ್ರೀ ಹರೀಶ್‍ಜೋಗಿ

“ಇಂದಿನ ಸ್ಪರ್ಧಾತ್ಮಕಯುಗದಲ್ಲಿಕನ್ನಡ ಮತ್ತುಇಂಗ್ಲಿಷ್ ಭಾಷೆ, ಎರಡು ಕಣ್ಣುಗಳಿದ್ದಂತೆ.ಭಾಷೆಒಂದು ಸಂಪರ್ಕ ಸೇತುವೆ. ಭಾವನೆಗಳಿಗೆ, ಚಿಂತನೆಗಳಿಗೆ ಇಂಬು ಕೊಡುವ ಹಾಗೂ ಅವುಗಳಿಗೆ ಆಕಾರ ನೀಡುವ ಮಾಧ್ಯಮ.ನಿಮ್ಮ ಮಾತೃ ಭಾಷೆಯಾವುದೇಆಗಿರಲಿ, ಆ ಭಾಷೆಯನ್ನು ಪ್ರೀತಿಸಿ ಜೊತೆಗೆಕನ್ನಡವನ್ನು ಫೋಷಿಸಿ”-ಎಂದು ಮಾಧವ ಕೃಪಾ ಶಾಲಾ ಶಿಕ್ಷಕರಾದಶ್ರೀ ಹರೀಶ್‍ಜೋಗಿಇವರು ಶಾಲೆಯರಾಜ್ಯೋತ್ಸವಆಚರಣೆಯ ಸಂದರ್ಭದಕಾರ್ಯಕ್ರಮದಲ್ಲಿ ಮುಖ್ಯಅಭ್ಯಾಗತರಾಗಿ ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಪಟ್ಟ ಮನರಂಜನಾಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ.ಪಿ.ಜಿ.ಪಂಡಿತ್, ಶಾಲಾ ಪ್ರಾಂಶುಪಾಲೆಯಾದ ಶ್ರೀಮತಿ ಜೆಸ್ಸಿ ಆಂಡ್ರ್ಯೂಸ್, ಉಪ ಪ್ರಾಂಶುಪಾಲೆಯರಾದ ಶ್ರೀಮತಿ ಶಕಿಲಾಕ್ಷಿ ಕೃಷ್ಣ, ಶ್ರೀಮತಿ ಜ್ಯೋತಿ ಸಂತೋಷ್ ಹಾಗೂ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶೋಭಾ ಹೆಗ್ಡೆ ಅವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿ ಶ್ರೀಯಾ ಸ್ವಾಗತಿಸಿದರೆ ಅಚಲಾ ಧನ್ಯವಾದಗೈದರು.ಮಧುಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕ ಸುಧೀಂದ್ರಕಾರ್ಯಕ್ರಮ ಸಂಘಟಿಸಿದರು.

No Comments

Leave A Comment